ಇಂದಿರಾ ಗಾಂಧಿ ಅವರನ್ನು ಅಪಹಾಸ್ಯ ಮಾಡುವ ಕ್ರಮ ಸರಿಯಲ್ಲ: ರಮಾನಾಥ ರೈ

Spread the love

ಇಂದಿರಾ ಗಾಂಧಿ ಅವರನ್ನು ಅಪಹಾಸ್ಯ ಮಾಡುವ ಕ್ರಮ ಸರಿಯಲ್ಲ: ರಮಾನಾಥ ರೈ

ಮಂಗಳೂರು: ಇಂದಿರಾ ಗಾಂಧಿ ಕಾಂಗ್ರೇಸ್ ಪಕ್ಷದ ಶ್ರೇಷ್ಠ ನಾಯಕಿ, ದುರ್ಬಲ ವರ್ಗದ ಜನರ ಪರವಾಗಿ ಕೆಲಸ ಮಾಡಿದವರು. ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಹೇಳಿ ಇಂದು ವಿರೋಧ ಪಕ್ಷಗಳು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರನ್ನು ಅಪಹಾಸ್ಯ ಮಾಡುವ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವರಾದ ರಮಾನಾಥ ರೈ ದಕ್ಷಿಣ ಕನ್ನಡ ಕಾಂಗ್ರೇಸ್ ಜಿಲ್ಲಾ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದುದರಿಂದ ಸಾಕಷ್ಟು ಪ್ರಮಾಣದಲ್ಲಿ ಲಾಭವೇ ಆಗಿದೆ. ಬ್ಯಾಂಕ್ ರಾಷ್ಟ್ರೀಕರಣವಾಗಿದೆ, ಭೂ ಸುಧಾರಣಾ ಕ್ರಮ ಜಾರಿಗೆ ಬಂದಿದೆ , ಬಡವರ ನಿವೇಶನ ನಿರ್ಮಾಣಕ್ಕೆವಾಗಿದೆ. ದಕ್ಷಿಣ ಕನ್ನಡ ಜನರಿಗೂ ಇದರಿಂದ ಸಾಕಷ್ಟು ಲಾಭ ಉಂಟಾಗಿದೆ. ಒಂದು ವೇಳೆ ಈ ಭಾಗದ ಜನರಿಗೆ ತುರ್ತು ಪರಿಸ್ಥಿತಿಯಿಂದ ಸಮಸ್ಯೆ ಉಂಟಾಗಿದ್ದರೆ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಈ ಭಾಗದಲ್ಲಿ ಗೆಲ್ಲುತ್ತಿರಲ್ಲಿಲ್ಲ. ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಈ ಜಿಲ್ಲೆಗೆ ಇಂದಿರಾ ಗಾಂಧಿಯವರ ಋಣ ಭಾರ ಇದೆ . ಬಡವರಿಗೆ, ಸಾಮಾನ್ಯರಿಗೆ ತುರ್ತು ಪರಿಸ್ಥಿತಿ ಇಂದ ಯಾವುದೇ ರೀತಿಯ ತೊಂದರೆ ಆಗದೆ ಅಭಿವೃದ್ದಿ ಕಾರ್ಯಕ್ಕೆ ಇನ್ನಷ್ಟು ವೇಗ ಸಿಕ್ಕಿದೆ ಎಂದರು

ಸುದ್ದಿಗೋಷ್ಠಿಯಲ್ಲಿ ನವೀನ್ ಡಿಸೋಜಾ, ಹಬ್ಬಾಸ್ ಅಲಿ , ಅಖಿಲತಾ, ನವಾಝ್ ಮುಂತಾದವರು ಉಪಸ್ಥಿತರಿದ್ದರು.


Spread the love