ಉಡುಪಿಯ ಹಳೆಯ ಬಹುಮಹಡಿ ಕಟ್ಟಡ ‘ರಾಯಲ್ ಮಹಲ್’ ಕುಸಿತ

Spread the love

ಉಡುಪಿಯ ಹಳೆಯ ಬಹುಮಹಡಿ ಕಟ್ಟಡ ‘ರಾಯಲ್ ಮಹಲ್’ ಕುಸಿತ

ಉಡುಪಿ: ಸುಮಾರು 50 ವರ್ಷ ಹಳೆಯದಾದ ಬಹುಮಹಡಿ ಕಟ್ಟಡವೊಂದರ ಪಾರ್ಶ್ವ ಭಾಗ ಕುಸಿದ ಘಟನೆ ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಎಂಬಲ್ಲಿ ನಡೆದಿದೆ

ಉಡುಪಿಯ ಉದ್ಯಮಿ ಸಾಯಿರಾಜ್ ಹೆಗ್ಡೆ ಎಂಬುವವರಿಗೆ ಸೇರಿದ ರಾಯಲ್ ಮಹಲ್ ಬಹುಮಹಡಿ ಕಟ್ಟಡದ ಇಂದು ಮಧ್ಯಾಹ್ನ ವೇಳೆ ಇದ್ದಕ್ಕಿದ್ದಂತೆ ಕುಸಿತಕೊಂಡಿದ್ದು, ಈ ವೇಳೆ ಕಟ್ಟಡದ ಒಳಗಡೆ ಇದ್ದವರು ಹೊರಗಡೆ ಓಡಿ ಬಂದ ಕಾರಣ ದೊಡ್ಡ ದುರಂತ ತಪ್ಪಿದೆ

ಕಟ್ಟಡದ ಪಾರ್ಶ್ವ ಭಾಗ ಸಂಪೂರ್ಣ ಕುಸಿದಿದ್ದು, ಕಟ್ಟಡದಲ್ಲಿ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಬೇಕರಿ ಸೇರಿದಂತೆ ಐದು ಆರು ಅಂಗಡಿಗಳಿದ್ದವು

ಸದ್ಯ ಅಗ್ನಿಶಾಮಕ ದಳದವರು ಬಿದ್ದ ಕಟ್ಟಡದ ಮಣ್ಣು ತೆರವು ಕಾರ್ಯಚರಣೆ ನಡೆಸುತ್ತಿದ್ದು, ಪೂರ್ತಿ ಕಟ್ಟಡವನ್ನು ಕೂಡಲೇ ತೆರವುಗೊಳಿಸವಂತೆ ನಗರ ಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ

YouTube player

Spread the love