ಉಡುಪಿ: ಅರಿವು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Spread the love

ಉಡುಪಿ: ಅರಿವು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ಡಿ-ಸಿಇಟಿ, ಪಿಜಿ-ಸಿಇಟಿ ಹಾಗೂ ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಾದ ವೈದ್ಯಕೀಯ (ಎಂಬಿಬಿಎಸ್, ಎಂಡಿ, ಎಂಎಸ್), ದಂತ ವೈದ್ಯಕೀಯ (ಬಿಡಿಎಸ್, ಎಂಡಿಎಸ್), ಆಯುಷ್ (ಬಿಆಯುಷ್, ಎಂಆಯುಷ್), ಇಂಜಿನಿಯರಿಂಗ್ ಟೆಕ್ನಾಲಜಿ (ಬಿ.ಇ, ಬಿ.ಟೆಕ್, ಎಂ.ಇ, ಎಂ.ಟೆಕ್), ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಿಆರ್ಕ್, ಎಂಆರ್ಕ್), ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬಿಎಸ್ಸಿ ಇನ್ ಹಾರ್ಟಿಕಲ್ಚರ್, ಅಗ್ರಿಕಲ್ಚರಲ್ ಎಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಫಾರೆಸ್ಟ್ರೀ, ವೆಟರಿನರಿ ಅಂಡ್ ಅನಿಮಲ್ ಸೈನ್ಸಸ್, ಫಿಶರೀಸ್, ಸೆರಿಕಲ್ಚರ್, ಹೋಮ್/ ಕಮ್ಯೂನಿಟಿ ಸೈನ್ಸ್‌, ಫುಡ್ ನ್ಯೂಟ್ರೀಷನ್ ಅಂಡ್ ಡಯಟೆಟಿಕ್ಸ್, ಬಿಫಾರ್ಮಾ, ಎಂ ಫಾರ್ಮಾ, ಫಾರ್ಮಾ ಡಿ ಅಂಡ್ ಡಿ ಫಾರ್ಮಾಗಳಲ್ಲಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರಿವು (ರಿನ್ಯೂವಲ್) ಸಾಲ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು – https://kmdconline.karnataka.gov.in- ನಿಗಮದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ. 3 ಕೊನೆಯ ದಿನ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ ಇಲ್ಲಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8277799990, ಜಿಲ್ಲಾ ಕಚೇರಿ ದೂ.ಸಂಖ್ಯೆ: 0820-2574990 ಅಥವಾ ಉಡುಪಿ ದೂ. ಸಂಖ್ಯೆ:0820-2574596, ಕಾರ್ಕಳ ದೂ.ಸಂಖ್ಯೆ: 08258-231101 ಹಾಗೂ ಕುಂದಾಪುರ ದೂ.ಸಂಖ್ಯೆ: 08254-230370 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments