ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೋರ್ ಕಮಿಟಿ ಸದಸ್ಯರ ನೇಮಕ

Spread the love

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೋರ್ ಕಮಿಟಿ ಸದಸ್ಯರ ನೇಮಕ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋರ್ ಕಮಿಟಿ ಸದಸ್ಯರ ನೇಮಕಾತಿ ಕುರಿತು ನಡೆದ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಿ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಸಭೆ ದಿನಾಂಕ 05.09.2025ರಂದು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಶಾಸಕರಾದ ಐವನ್ ಡಿಸೋಜ ಅವರ ಉಪಸ್ಥಿತಿಯಲ್ಲಿ ನಡೆದಿತ್ತು.

ಸಭೆಯ ನಿರ್ಣಯದಂತೆ ಕೆಳಕಂಡವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಿಸಲಾಗಿದೆ:

  • ಅಶೋಕ ಕುಮಾರ್ ಕೊಡವೂರು – ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
  • ಪ್ರತಾಪಚಂದ್ರ ಶೆಟ್ಟಿ – ಮಾಜಿ ಶಾಸಕರು, ವಿಧಾನ ಪರಿಷತ್
  • ವಿನಯ ಕುಮಾರ್ ಸೊರಕೆ – ಮಾಜಿ ಸಚಿವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು
  • ಜಯಪ್ರಕಾಶ್ ಹೆಗ್ಡೆ – ಮಾಜಿ ಸಂಸದರು, ಮಾಜಿ ಸಚಿವರು
  • ಎಂ.ಎ. ಗಫೂರ್ – ಉಪಾಧ್ಯಕ್ಷರು, ಕೆಪಿಸಿಸಿ
  • ಗೋಪಾಲ್ ಪೂಜಾರಿ – ಮಾಜಿ ಶಾಸಕರು
  • ದಿನೇಶ್ ಹೆಗ್ಡೆ – 2023ರ ವಿಧಾನಸಭಾ ಅಭ್ಯರ್ಥಿ
  • ಪ್ರಸಾದ್ ರಾಜ್ ಕಾಂಚನ್ – 2023ರ ವಿಧಾನಸಭಾ ಅಭ್ಯರ್ಥಿ
  • ಮುನಿಯಲ್ ಉದಯ ಕುಮಾರ್ ಶೆಟ್ಟಿ – 2023ರ ವಿಧಾನಸಭಾ ಅಭ್ಯರ್ಥಿ
  • ರಾಜು ಪೂಜಾರಿ – ದ.ಕ. ಹಾಗೂ ಉಡುಪಿ ವಿಧಾನ ಪರಿಷತ್ ಉಪಚುನಾವಣೆಯ ಅಭ್ಯರ್ಥಿ
  • ಕಿಶನ್ ಹೆಗ್ಡೆ – ಕಾರ್ಯಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ

ಈ ನೂತನವಾಗಿ ನೇಮಕಗೊಂಡ ಕೋರ್ ಕಮಿಟಿಯ ಮಾರ್ಗದರ್ಶನದಲ್ಲಿ: ಪಕ್ಷದ ಸಂಘಟನೆ ಬಲಪಡಿಸುವುದು. ಸರ್ಕಾರದಿಂದ ಮಾಡುವ ನಾಮ ನಿರ್ದೇಶನ ಕುರಿತು ಚರ್ಚೆ, ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಇವುಗಳನ್ನು ಕೈಗೊಳ್ಳಲು ನಿರ್ಧಾರಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments
Dr Gerald Pinto
1 hour ago

Voters are minority and Dalits…leadership
Some one else. How many these leaders will in mla or mp elections to Congress?