ಉಡುಪಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ; ಪಾರ್ಕಿಂಗ್ ಮಾರ್ಪಾಡು

Spread the love

ಉಡುಪಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ; ಪಾರ್ಕಿಂಗ್ ಮಾರ್ಪಾಡು

ಉಡುಪಿ: ಜನವರಿ 8ರಂದು ಕರ್ನಾಟಕ ರಾಜ್ಯ   ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ ಹಾಗೂ ಕಾಪುವಿನಲ್ಲಿ ಸಾಧನ ಸಮಾವೇಶ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿತ್ತಿದ್ದು ವಾಹನ ಸಂಚಾರದಲ್ಲಿ ಮಾರ್ಪಾಡುಗೊಳಿಸಿ ಜಿಲ್ಲಾ ಪೋಲಿಸ್ ಪ್ರಕಟಣೆ ಹೊರಡಿಸಿದೆ.

ಬೈಂದೂರಿನ ಗಾಂದಿ ಮೈದಾನದಲ್ಲಿ ನಡೆಯಲಿರುವ ಸಾಧನ ಸಮಾವೇಶ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅರೆಶಿರೂರು ಹೆಲಿಪ್ಯಾಡ್‌ನಿಂದ ಬೈಂದೂರು ಗಾಂಧಿಮೈದಾನಕ್ಕೆ ಆಗಮಿಸಲಿದ್ದು, ಸದ್ರಿ ಸಮಯ ಬೆಳಿಗ್ಗೆ 07:00 ಗಂಟೆಯಿಂದ 13:00 ಗಂಟೆಯ ತನಕ ಬೈಂದೂರು ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಬಹುದು ಹಾಗೂ ಯಡ್ತರೆ ಜಂಕ್ಷನ್‌ನಿಂದ ಬೈಂದೂರು ಹೊಸ ಬಸ್‌ ನಿಲ್ದಾಣದ ವರೆಗೆ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ವಾಹನ ಪಾರ್ಕಿಂಗ್‌ ನಿಶೇದಿಸಿದೆ. ವಾಹನ ಪಾರ್ಕಿಂಗ್‌ಗೆ ಈ ಕೆಳಗಿನಂತೆ ಸ್ಥಳವನ್ನು ಸೂಚಿಸಲಾಗಿದೆ.

  ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಧ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಬೈಂದೂರು ಶಿವ ದರ್ಶನ್‌ ಹೋಟೆಲ್‌ ಎದುಗಡೆ ಜಗನ್ನಾಥ ಶೆಟ್ಟಿಯವರ ಮನೆಯ ಬಳಿ ಇರುವ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಖಾಸಗಿ ಕಾರುಗಳು & ಮಾಧ್ಯಮದವರಿಗೆ ಬೈಂದೂರು ಹೊಸ ಬಸ್‌ ನಿಲ್ದಾಣದಲ್ಲಿ & ಅದರ ಪಕ್ಕದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರನ್ನು ಕರೆದುಕೊಂಡು ಬರುವ ಬಸ್ಸು ಹಾಗೂ ಟೆಂಪೋಗಳಿಗೆ ಹೊಸ ಬಸ್‌ ನಿಲ್ದಾಣದ ಎದುರು ರಾ,ಹೆ 66 ರ ಪಶ್ಚಿಮಕ್ಕೆ ಇಳಿಜಾರು ರಸ್ತೆಯಲ್ಲಿ ಮೈಸೂರು ಮಿನರಲ್ಸ್ ಕಛೇರಿ ಪಕ್ಕ (ಮಾಸ್ತಿಕಟ್ಟೆ ದೇವಸ್ಥಾನದ ಎದುರುಗಡೆ) ಹಾಗೂ ಯಡ್ತರೆಯ ಜೆ.ಎನ್‌.ಅರ್‌ ಹಾಲ್‌ ಪಕ್ಕದ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ವಾಹನಗಳಿಗೆ ತಾಲೂಕು ಕಛೇರಿಯ ಕಂಪೌಂಡ್‌ ಒಳಗೆ ಹಾಗೂ ತಾಲೂಕು ಕಛೇರಿಯ ಹಿಂಭಾಗ ಶಾಸಕರ ಕಛೇರಿಯ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಹಶೀಲ್ದಾರ್‌ ಕಛೇರಿಯ ಬರುವ ರಸ್ತೆಯಲ್ಲಿ ಬಾರದೇ ಶ್ಯಾನುಬಾಗ್‌ ಹೋಟೆಲ್‌ ಪಕ್ಕದ ರಸ್ತೆಯಲ್ಲಿ ಹಾಗೂ ಬೈಂದೂರು ಜಂಕ್ಷನ್‌ ಮಾರ್ಗವಾಗಿ ಬರುವಂತೆ ಸೂಚಿಸಲಾಗಿದೆ.

ಬ್ರಹ್ಮಾವರ ಕಾರ್ಯಕ್ರಮ

ಬ್ರಹ್ಮಾವರ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಕಾರ್ಯಕರ್ತರಿಗೆ ಅವರ ವಾಹನಗಳನ್ನು ಪಾರ್ಕಿಂಗ್ ಮಾಡುವ ಬಗ್ಗೆ ನಿಗದಿಪಡಿಸಲಾದ ಸ್ಥಳದ ವಿವರ ಈ ಕೆಳಗಿನಂತಿದೆ.

ಬಾರ್ಕೂರು ಕಡೆಯಿಂದ ಬರುವಂತಹ ಘನ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಗಾಂಧಿ ಮೈದಾನದ ಎಡ ಭಾಗ, ದ್ವಿಚಕ್ರ ವಾಹನಗಳಿಗೆ ಪ್ರಣಾವ್ ಆಸ್ಪತ್ರೆ ಪಕ್ಕದಲ್ಲಿರುವ ಖಾಲಿ ಸ್ಥಳ, ನಾಲ್ಕು ಚಕ್ರದ ವಾಹನಗಳಿಗೆ ಹಂದಾಡಿ ಪಂಚಾಯತ್ ಎದುರು.

ಹೆಬ್ರಿಕಡೆಯಿಂದ ಮತ್ತು ಪೇತ್ರಿ ಕಡೆಯಿಂದ ಬರುವಂತಹ ಘನ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಬ್ರಹ್ಮಾವರ ಹಳೇ ಪೊಲೀಸ್ ಠಾಣೆಯ ಎದುರುಗಡೆ (ಹೋಮ್ ಗಾರ್ಡ ಕಚೇರಿ ಎದುರು) ಇರುವ ಖಾಲಿ ಸ್ಥಳ ಕುಂದಾಪುರ ಕಡೆಯಿಂದ ಬರುವಂತಹ ಬಸ್‌ಗಳಿಗೆ ಮತ್ತು ಘನ ವಾಹನಗಳಿಗೆ ಭರಣಿ ಪೆಟ್ರೋಲ್ ಬಂಕ್ ಎದುರುಗಡೆಯಿರುವ ಸರ್ವಿಸ್ ರಸ್ತೆಯಲ್ಲಿ, ಉಡುಪಿ ಕಡೆಯಿಂದ ಬರುವಂತಹ ಬಸ್‌ಗಳಿಗೆ ಮತ್ತು ಘನವಾಹನಗಳಿಗೆ ಆಶ್ರಯ ಹೋಟೇಲ್ ಬಳಿ ಇರುವ ಖಾಲಿ ಸ್ಥಳ ರಾ.ಹೆ. 66, ದ್ವಿಚಕ್ರ ವಾಹನಗಳಿಗೆ ದುರ್ಗಾ ಸಭಾ ಭವನದ ಬಳಿ ಹಂದಾಡಿ, ಬಾರಕೂರು ಕಡೆಯಿಂದ ಬರುವ ಬಸ್ಸುಗಳು ಗುಡ್ಡೇ ಬಾರ್ ಬಳಿ  ಜನರನ್ನು ಇಳಿಸಿ ಕಚ್ಚೂರು ಮಾಲ್ತೀದೇವೆ ದೇವಸ್ಥಾನದ ಬಳಿ ಇರುವ ಖಾಲಿ ಸ್ಥಳದಲ್ಲಿ ನಿಲ್ಲಿಸಲು ಸೂಚಿಸಲಾಗಿದೆ.

ಕಾಪು ಕಾರ್ಯಕ್ರಮ

ಕಾಪುವಿನ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಕೆಳಕಂಡ ಸ್ಥಳಗಳ್ಲಿ ಮಾಡಲಾಗಿದೆ

ಘನ ವಾಹನ ಹಾಗೂ ನಾಲ್ಕು ಚಕ್ರದ ವಾಹನ ನಿಲುಗಡೆ: ಪಡುಬಿದ್ರೆ ಹಾಗೂ ಶಿರ್ವ ಕಡೆಯಿಂದ ಬರುವ ವಾಹನಗಳಿಗೆ ವಿದ್ಯಾನಿಕೇತನ ಸಮೂಹ ಸಂಸ್ಥೆ ಕಾಪು, ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ದಂಡತೀರ್ಥ ಶಾಲಾ ಮೈದಾನದಲ್ಲಿ ಹಾಗೂ ಪಡುಬಿದ್ರೆ ಹಾಗೂ ಶಿರ್ವ ಕಡೆಯಿಂದ ಬರುವ ವಾಹನಗಳಿಗೆ ಹಳೆ ಮಾರಿಗುಡಿ ದೇವಸ್ಥಾನ ವಠಾರದಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ದ್ವಿಚಕ್ರ ವಾಹನಗಳಿಗೆ ನಿಲುಗಡೆ: ಶಿರ್ವ, ಮಜೂರು, ಬೆಳಪು ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕೆರೆಯ ಎದುರುಗಡೆ, ಉಡುಪಿ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಹೊಸ ಮಾರಿಗುಡಿ ಎದುರುಗಡೆ, ಪಡುಬಿದ್ರೆ ಕಡೆಯಿಂದ ಬರುವ ದ್ವಿಚಕ್ರ ವಾಹಗಳಿಗೆ ಪ್ರಾಥಮಿಕ ಶಾಲೆ ಕಾಪು ಪಡುವಿನಲ್ಲಿ ವ್ಯವಸ್ಥೆಗೊಳಿಸಲಾಗಿದೆ.

 


Spread the love