ಉಡುಪಿ ಜಿಲ್ಲೆಯ 15 ಮಂದಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

Spread the love

ಉಡುಪಿ ಜಿಲ್ಲೆಯ 15 ಮಂದಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಮಟ್ಟದ 2025-26ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 15 ಮಂದಿ ಶಿಕ್ಷಕರು ಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಸರಸ್ವತಿ (ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮರೂರು ಕುಂದಾಪುರ), ವಸುಂಧರ (ಸಹ ಶಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೆಯಂಗಡಿ ಬೊಮ್ಮಾರಬೆಟ್ಟು), ಹರೀಶ್ ಪೂಜಾರಿ (ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಕಾರ್ಕಳ ತಾಲೂಕು), ಸುಮಂಗಲಾ ಗಾಣಿಗ (ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿಸ್ಮತಿ ಬೈಂದೂರು ವಲಯ) ವಿಜಯ ಎ (ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೆರೆ ಅಚ್ಲಾಡಿ ಬ್ರಹ್ಮಾವರ ವಲಯ)

ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಶೇಖರ ಕುಮಾರ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು ಕುಂದಾಪುರ), ವೀಣಾ (ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಬ್ರಹ್ಮಾವರ ತಾಲೂಕು), ರಮಣಿ (ಮುಖ್ಯ ಶಿಕ್ಷಕರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಂದಿಕೂರು), ತಿಮ್ಮಪ್ಪ ಗಾಣಿಗ (ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕಾನು ಬೈಂದೂರು ವಲಯ), ಹೆಚ್ ಪ್ರಭಾವತಿ (ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು – ಮಾಳ).

ಪ್ರೌಢ ಶಾಲಾ ವಿಭಾಗ
ಶಶಿಶಂಕರ್ ಹೆಚ್ ಎಂ (ಸಹಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ), ಎ ನಟರಾಜ ಉಪಾಧ್ಯ (ಚಿತ್ರಕಲಾ ಶಿಕ್ಷಕರು ಎಸ್ ವಿ ಹೆಚ್ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇನ್ನಂಜೆ), ಜಗದೀಶ ಕೆ (ದೈಹಿಕ ಶಿಕ್ಷಣ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ), ಸಂತೋಷ (ಸಹಶಿಕ್ಷಕರು ರಾಮ್ಸನ್ ಸರ್ಕಾರಿ ಪ್ರೌಢ ಶಾಲೆ ಕಂಡ್ಲೂರು ಕುಂದಾಪುರ ತಾಲೂಕು) ಜಗದೀಶ ಶೆಟ್ಟಿ (ಸಹಶಿಕ್ಷಕರು ಜನತಾಪ್ರೌಢ ಶಾಲೆ, ಹೆಮ್ಮಾಡಿ ಬೈಂದೂರು ವಲಯ)


Spread the love
Subscribe
Notify of

0 Comments
Inline Feedbacks
View all comments