ಉಡುಪಿ: ಡಿ.6 ರಂದು ಹಿಂದೂ ಯುವ ಸೇನೆ ವತಿಯಿಂದ ಬಡ ಕುಟುಂಬಕ್ಕೆ ನೂತನ ಗೃಹ `ಅಯೋಧ್ಯಾ’ ಹಸ್ತಾಂತರ

Spread the love

ಉಡುಪಿ: ಡಿ.6 ರಂದು ಹಿಂದೂ ಯುವ ಸೇನೆ ವತಿಯಿಂದ ಬಡ ಕುಟುಂಬಕ್ಕೆ ನೂತನ ಗೃಹ ‘ಅಯೋಧ್ಯಾ’ ಹಸ್ತಾಂತರ

ಉಡುಪಿ: ಹಿಂದೂ ಯುವ ಸೇನೆ ಉಡುಪಿ ವತಿಯಿಂದ ದಾನಿಗಳ ಸಹಕಾರದಿಂದ ಮಲ್ಪೆ ಕೊಳ ಪರಿಸರದಲ್ಲಿ ನಿರ್ಮಿಸಲಾದ ನೂತನ ಗೃಹ `ಅಯೋಧ್ಯಾ’ ವನ್ನು ಡಿಸೆಂಬರ್ 6 2019ನೇ ಶುಕ್ರವಾರ ಹಸ್ತಾಂತರಿಸಲಿದ್ದಾರೆ.

ಮಲ್ಪೆ ಕೊಳ ನಿವಾಸಿ ಶ್ರೀಮತಿ ಬೇಬಿ ಸಾಲ್ಯಾನ್ ರವರ ಜೀವನಾಧಾರವಾಗಿದ್ದ ಮನೆ ಈ ಬಾರಿಯ ಮಳೆಗಾಲದ ಭಾರಿ ಮಳೆ ಗಾಳಿಗೆ ಸಿಲುಕಿ ಕುಸಿದ ಪರಿಣಾಮ ಕುಟುಂಬ ತೀರಾ ಸಂಕಷ್ಟಕ್ಕೀಡಾಗಿತ್ತು. ಈ ಸಂದಿಗ್ಧ ಸಂದರ್ಭದಲ್ಲಿ ಕುಟುಂಬದ ನೆರವಿಗಾಗಮಿಸಿದ ಹಿಂದೂ ಯುವಸೇನೆಯ ಉಡುಪಿ ಜಿಲ್ಲಾ ಘಟಕ ಶ್ರೀಮತಿ ಬೇಬಿ ಸಾಲ್ಯಾನ್‍ರವರಿಗೆ ಸುಸಜ್ಜಿತ ಸೂರು ಕಲ್ಪಿಸುವ ಹೊಣೆ ಹೊತ್ತು ಇದೀಗ ದಾನಿಗಳ ಸಹಕಾರದಿಂದ ಗೃಹ ನಿರ್ಮಿಸಿ ಅಶಕ್ತ ಕುಟುಂಬಕ್ಕೆ ಹಸ್ತಾಂತರಿಸಲು ಸಿದ್ಧವಾಗಿದೆ.

ಮಲ್ಪೆ ಶಿವಪಂಚಾಕ್ಷರಿ ಭಜನಾ ಮಂದಿರದ ಬಳಿ ನಿರ್ಮಿಸಿರುವ ಈ ನೂತನ ಗೃಹ `ಅಯೋಧ್ಯಾ’ ವನ್ನು ಡಿಸೆಂಬರ್ 6 ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಲಯದ ಸಂಚಾಲಕರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ ಹಸ್ತಾಂತರಿಸಲಿದ್ದಾರೆ.

ಈ ಸಮಾರಂಭದಲ್ಲಿ ಶಾಸಕರಾದ  ರಘುಪತಿ ಭಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ  ಯಶ್‍ಪಾಲ್ ಸುವರ್ಣ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ  ವಿನಯ ಕರ್ಕೇರ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ  ಕೃಷ್ಣ ಸುವರ್ಣ, ನಗರ ಸಭಾ ಸದಸ್ಯರಾದ  ಲಕ್ಷ್ಮೀ ಮಂಜುನಾಥ, ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷರಾದ  ಮಂಜು ಕೊಳ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.


Spread the love