ಉಡುಪಿ ಬಿಜೆಪಿ ನಗರ ಸಮಿತಿಯಿಂದ ಸಂಭ್ರಮದ ಕಮಲ ಕಲವರ 2025 ಕೆಸರ್ಡ್ ಒಂಜಿ ದಿನ

Spread the love

ಉಡುಪಿ ಬಿಜೆಪಿ ನಗರ ಸಮಿತಿಯಿಂದ ಸಂಭ್ರಮದ ಕಮಲ ಕಲವರ 2025 ಕೆಸರ್ಡ್ ಒಂಜಿ ದಿನ

ಉಡುಪಿ: ಭಾರತೀಯ ಜನತಾ ಪಕ್ಷ ಉಡುಪಿ ನಗರ ಸಮಿತಿ ವತಿಯಿಂದ ಕಮಲ ಕಲವರ 2025 ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ತಾಂಗದಗಡಿ ಗುಂಡಿಬೈಲು – ಅಂಬಾಗಿಲು ಸಮೀಪದ ಗದ್ದೆಯಲ್ಲಿ ಭಾನುವಾರ ಜರುಗಿತು.

ಕಾರ್ಯಕ್ರಮಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಚಾಲನೆ ನೀಡಿ ಶುಭ ಹಾರೈಸಿದರು.

ಕಮಲ ಕಲರವ 2025 ಕೆಸರ್ಡ್ ಒಂಜಿ ದಿನ ಅಂಗವಾಗಿ ಸಾರ್ವಜನಿಕರಿಗೆ ಓಟ, ಪಿರಮಿಡ್ ರಚನೆ, ಜನಕಂಬಳ, ಜೋಡಿ ಓಟ, ಸಂಗೀತ ಕುರ್ಚಿ, ಲಿಂಬೆ ಚಮಚ, ನಿಧಿ ಶೋಧ, ಪಾಳೆ ಓಟ, ಹಗ್ಗ ಜಗ್ಗಾಟ, ಗಿರ್ ಗಿಟ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಾರ್ವಜನಿಕರು ವಯಸ್ಸಿನ ಮಿತಿಯಿಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಕೆಲವರು ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ, ಉಡುಪಿ ಶಾಸಕ ಯಶಪಾಲ್ ಸುವರ್ಣ ಕೂಡ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮಕ್ಕಳಿಗಾಗಿ, ಪುರಷರಿಗಾಗಿ, ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು

ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ನಗರ ಅಧ್ಯಕ್ಷರಾದ ದಿನೇಶ್ ಅಮೀನ್, ಪಕ್ಷದ ಹಿರಿಯ ಮುಖಂಡರು, ನಗರ ಸಭಾ ಸದಸ್ಯರು, ವಿವಿಧ ಮೋರ್ಚಗಳ ಜಿಲ್ಲಾ ಹಾಗೂ ಮಂಡಲದ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments