ಉಡುಪಿ ಸೆನ್ ಅಪರಾಧ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Spread the love

ಉಡುಪಿ ಸೆನ್ ಅಪರಾಧ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸರು ಬಂಧಿಸಿ ರೂ.8.70 ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮೂಲತಃ ಹೈದರಾಬಾದ್ ನಿವಾಸಿ ಪ್ರಸ್ತುತ ಸರಳೇ ಬೆಟ್ಟು ಹೆರ್ಗಾದಲ್ಲಿ ವಾಸವಾಗಿರುವ ತಿಪಿರ್ ಸೇನಿ ಆದಿತ್ಯ (21) ಮತ್ತು ತೆಲಂಗಾಣ ರಾಜ್ಯದ ಪ್ರಸ್ತುತ ಈಶ್ವರನಗರದಲ್ಲಿ ವಾಸವಾಗಿರುವ ಮೊಗಿಲಿ ಹೇಮಂತ್ ರೆಡ್ಡಿ (20) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಇವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷ ಸೀತಾರಾಮ ಪಿ ಇವರ ಸೂಚನೆ ಯಂತೆ ಲಕ್ಷ್ಮಣ್ ಪೊಲೀಸ್ ಉಪನಿರಿಕ್ಷಕ ಸೆನ್ ಅಪರಾಧ ಇವರು ಭಾನುವಾರ ಸಿಬಂದಿಯವರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ರಾಹೆ 169ಎ ಪಕ್ಕದಲ್ಲಿರುವ ಶಂಕರನಾರಾಯಣ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ ಸುಮಾರು ರೂ 1.20 ಲಕ್ಷ ಮೌಲ್ಯದ 4 ಕೆಜಿ 034ಗ್ರಾಂ ಗಾಂಜಾ, ತಲಾ ರೂ 10000 ಮೌಲ್ಯದ 2 ಮೊಬೈಲ್ ಹ್ಯಾಂಡ್ ಸೆಟ್, ಗಾಂಜಾ ಮಾರಾಟ ಮಾಡಲು ಪ್ರಯಾಣಕ್ಕೆ ಬಳಸಿರುವ ಸುಮಾರು ರೂ 7ಲಕ್ಷ ಮೌಲ್ಯದ ಇನ್ನೋವಾ ಕಾರು ಮತ್ತು ರೂ 30000 ಮೌಲ್ಯದ ಸ್ಕೂಟರ್ ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ 8.70 ಲಕ್ಷ ಆಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸೀತಾರಾಮ ಪಿ ಮತ್ತು ಪಿಎಸ್ ಐ ಲಕ್ಷ್ಮಣ, ಎಎಸ್ ಐ ಕೇಶವ ಗೌಡ, ಸಿಬಂಧಿಯವರಾದ ಕೃಷ್ಣಪ್ರಸಾದ್, ನಾಗೇಶ್, ರಾಘವೇಂದ್ರ, ಅರುಣ್ ಕುಮಾರ್, ಸಂಜಯ್ ಮತ್ತು ಜೀವನ್ ಪಾಲ್ಗೊಂಡಿದ್ದರು.


Spread the love