ಉಪ್ಪಿನಂಗಡಿ: ಕಾಣೆಯಾದವರ ಪತ್ತೆಗೆ ಮನವಿ

Spread the love

ಉಪ್ಪಿನಂಗಡಿ: ಕಾಣೆಯಾದವರ ಪತ್ತೆಗೆ ಮನವಿ

ಮಂಗಳೂರು:   ಪುತ್ತೂರು  ತಾಲೂಕಿನ ನೆಕ್ಕಿಲಾಡಿ  ಗ್ರಾಮದ ಸುಭಾಷ ನಗರದ ನಿವಾಸಿ  ಮಂಜೂರ ಅಲಿ ಶೈಖ  ಆದಂಸಾಬ್ (43 ) ಎಂಬವರು   ಕಕ್ಕೆಪದವು ಎಂಬಲ್ಲಿಗೆ ಹೋಗಿಬರುತ್ತೇನೆಂದು ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ: ಎತ್ತರ 5 ಅಡಿ 3 ಇಂಚು,  ಎಣ್ಣೆ ಕಪ್ಪು  ಮೈ ಬಣ್ಣ, ಸಾಧಾರಣ ಶರೀರ, ದುಂಡು ಮುಖ, ಚಾನೆ ತಲೆ. ಕಾಣೆಯಾದ ದಿನ ಬಿಳಿ ಬಣ್ಣದ ಪ್ಯಾಂಟ್ ಮತ್ತು ನೀಲಿ ಬಣ್ಣದ ಹೂವಿನ ಡಿಸೈನ್ ಇರುವ  ಶರ್ಟ್ ಧರಿಸಿದ್ದರು. ಕನ್ನಡ, ಬ್ಯಾರಿ, ಹಿಂದಿ, ಉರ್ದು ಭಾಷೆ  ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಉಪ್ಪಿನಂಗಡಿ ಪೋಲಿಸ್ ಠಾಣೆ  ಸಂಪರ್ಕಿಸುವಂತೆ  ಪೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments