ಉಳ್ಳಾಲದಲ್ಲಿ ಅನೈತಿಕ ಪೋಲಿಸ್ಗಿರಿ, ವಿದ್ಯಾರ್ಥಿಗಳಿಗೆ ಹಲ್ಲೆ, ಇಬ್ಬರ ಬಂಧನ

Spread the love

ಉಳ್ಳಾಲದಲ್ಲಿ ಅನೈತಿಕ ಪೋಲಿಸ್ ಗಿರಿ ಇಬ್ಬರ ಬಂಧನ

ಮಂಗಳೂರು: ಉಳ್ಳಾಲ ಕೇಂದ್ರ ಬಸ್ಸು ನಿಲ್ದಾಣದ ಬಳಿ ಇದ್ದ ಭಿನ್ನಕೋಮಿನ ವಿದ್ಯಾರ್ಥಿ ಜೋಡಿಗಳನ್ನು ಹಿಡಿದು ತಂಡವೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.

immoral-policing-ullal-mangaloean-com

ಮಾಹಿತಿಗಳ ಪ್ರಕಾರ ವಿದ್ಯಾರ್ಥಿನಿಯೋರ್ವಳು ತನ್ನ ಕಾಲೇಜಿನ ಸಹಪಾಠಿಯೊಂದಿಗೆ ಸೋಮೇಶ್ವರ ತೆರಳಿ ಬಳಿಕ ಬಸ್ಸಿಗಾಗ ಉಳ್ಳಾಲ ಜಂಕ್ಷನ್ ಬಳಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಗುಂಪೊಂದು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಮೂರು ಮಂದಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love