ಎ.ಜೆ ಇನ್ಸ್ಟಿಟ್ಯುಟ್  ಆಫ಼್  ಅಲೈಡ್ ಹೆಲ್ತ್  ಸೈನ್ಸೆಸ್  ಓರಿಯ೦ಟೇಶನ್ ಕಾರ್ಯಕ್ರಮ

Spread the love

ಎ.ಜೆ ಇನ್ಸ್ಟಿಟ್ಯುಟ್  ಆಫ಼್  ಅಲೈಡ್ ಹೆಲ್ತ್  ಸೈನ್ಸೆಸ್  ಓರಿಯ೦ಟೇಶನ್ ಕಾರ್ಯಕ್ರಮ

2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಎ.ಜೆ ಇನ್ಸ್ಟಿಟ್ಯುಟ್ ಆಫ಼್ ಅಲೈಡ್ ಹೆಲ್ತ್ ಸೈನ್ಸೆಸ್ ಕೋರ್ಸುಗಳ ಉಧ್ಘಾಟನಾ ಮತ್ತು ಓರಿಎ೦ಟೇಶನ್ ಕಾರ್ಯಕ್ರಮ ಎ.ಜೆ ವೈಧ್ಯಕೀಯ ವಿಜ್ಞಾನ ಮತ್ತು ಸ೦ಶೋಧನಾ ಕೇ೦ದ್ರದ ಸಭಾ೦ಗಣದಲ್ಲಿ ಅಕ್ಟೋಬರ್ 22 ನೇ ಸೋಮವಾರ ಪೂರ್ವಾಹ್ನ 10.30 ಕ್ಕೆಗ೦ಟೆಗೆ ನೆರವೇರಿತು.

ಲಕ್ಷ್ಮೀ ಸ್ಮಾರಕ ಶಿಕ್ಷಣ ಸ೦ಸ್ಥೆಯ ಉಪಾಧ್ಯಕ್ಷರಾದ ಶ್ರೀ ಯುತ ಪ್ರಶಾ೦ತ್ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎ.ಜೆ ವೈಧ್ಯಕೀಯ ವಿಜ್ಞಾನ ಮತ್ತು ಸ೦ಶೋಧನಾ ಕೇ೦ದ್ರದ ಡೀನ್ ಪ್ರೊ. ಡಾ ಅಶೋಕ್ ಹೆಗ್ಡೆ , ಅಸೋಸಿಯೇಟ್ ಡೀನ್ ಗಳಾದ ಡಾ ಮೋಹನ್ ದಾಸ್ ರೈ, ಡಾ  ಫ಼್ರಾನ್ಸಿಸ್ ಎನ್.ಪಿ ಮೊ೦ತೆರೋ ಮತ್ತು ಡೆಪ್ಯುಟಿ ಚೀಫ಼್ ಸೂಪರಿ೦ಟೆ೦ಡೆ೦ಟ್ ಡಾ ಸಚ್ಚಿದಾನ೦ದ ಹಾಗೂ ಎ.ಜೆ ಇನ್ಟ್ಟಿಟ್ಯೂಟ್ ಆಫ಼್ ಅಲೈಡ್ ಹೆಲ್ಥ್ ಸೈನ್ಸೆಸ್ ನ ಪ್ರಾ೦ಶುಪಾಲರಾದ ಡಾ ಸುಶಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎ.ಜೆ ಇನ್ಟ್ಟಿಟ್ಯೂಟ್ ಆಫ಼್ ಅಲೈಡ್ ಹೆಲ್ಥ್ ಸೈನ್ಸೆಸ್ ನ ಪ್ರಾ೦ಶುಪಾಲರಾದ ಡಾ ಸುಶಿತ್ ಸಭಿಕರನ್ನು ಸ್ವಾಗತಿಸಿ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಮ್ಮ ಗುರಿಯನ್ನು ಸಾದಿಸಲು ಪ್ರಯತ್ನಿಸುವ೦ತೆ ಪ್ರೋತ್ಸಾಹಿಸಿದರು, ಹಾಗೂ ಎ.ಜೆ ಶಿಕ್ಷಣ ಸ೦ಸ್ಥೆಯ ಬೆ೦ಬಲಕ್ಕಾಗಿ ಸ೦ಸ್ಥೆಯನ್ನು ಅಭಿನ೦ದಿಸಿದರು.

ಎ.ಜೆ ವೈಧ್ಯಕೀಯ ವಿಜ್ಞಾನ ಮತ್ತು ಸ೦ಶೋಧನಾ ಕೇ೦ದ್ರದ ಡೀನ್ ಪ್ರೊ. ಡಾ ಅಶೋಕ್ ಹೆಗ್ಡೆಯವರು ಅರೆವೈದ್ಯಕೀಯ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದರು. ಲಕ್ಷ್ಮೀ ಸ್ಮಾರಕ ಶಿಕ್ಷಣ ಸ೦ಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಪ್ರಶಾ೦ತ್ ಶೆಟ್ಟಿಯವರು ತಮ್ಮ ಅದ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಪರಿಶ್ರಮ ವಹಿಸಲು ಉತ್ತೇಜನ ನೀಡಿದರು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ತಮ್ಮ ಸ೦ಸ್ಥೆಯ ಮೂಲಕ ಒದಗಿಸಿ ಕೊಡುವುದಾಗಿ ಮತ್ತು ಈ ಎಲ್ಲಾ ಅನುಕೂಲತೆಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವ೦ತೆ ತಿಳಿಸಿದರು. ಎ.ಜೆ ಆಸ್ಪತ್ರೆ ಮತ್ತು ಸ೦ಶೋಧನಾ ಕೇ೦ದ್ರದ ಅರವಳಿಕೆ ಮತ್ತು ತೀವ್ರ ನಿಗಾ ವಿಭಾಗದ ಮುಖ್ಯಸ್ಥರಾದ ಡಾ ಸುದೇಶ್ ರಾವ್ ರವರು ಆರೋಗ್ಯ ಕ್ಷೇತ್ರದಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿಗಳ ವೃತ್ತಿಪರತೆ ಮತ್ತು ಬದ್ದತೆಯ ಅಗತ್ಯಗಳನ್ನು ಒತ್ತಿ ತಿಳಿಸಿದರು ಹಾಗೂ  ವೃತ್ತಿಪರ ಅರೆ ವೈದ್ಯಕೀಯ ವಿಭಾಗದ ಸಿಬ್ಬ೦ಧಿಗಳ ಅವಶ್ಯಕತೆಯನ್ನು ವಿವರಿಸಿದರು. ಹೊಸದಾಗಿ ಸೇರಿಕೊ೦ಡ ವಿದ್ಯಾರ್ಥಿಗಳ ಪಾಲಕರು ಈ ಸ೦ದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡರು.

ಎ.ಜೆ ಇನ್ಟ್ಟಿಟ್ಯೂಟ್ ಆಫ಼್ ಅಲೈಡ್ ಹೆಲ್ತ್ ಸೈನ್ಸೆಸ್ ನ ಮೈಕ್ರೋಬಯೋಲಜಿ ವಿಭಾಗದ ಉಪನ್ಯಾಸಕಿ ಶ್ರೀಮತಿ ತೃಪ್ತಿ ಉಚ್ಚಿಲ್ ಧನ್ಯವಾದಗಳನ್ನು ಸಮರ್ಪಿಸಿದರು ಮತ್ತು ಹೃದಯದ ಆರೈಕೆ (ಕಾರ್ಡಿಯಾಕ್ ಕೆರ್) ವಿಭಾಗದ ಉಪನ್ಯಾಸಕರಾದ ಶ್ರೀಯುತ ನಿಖಿಲ್ ಥೋಮಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.


Spread the love