ಕಟೀಲು ಮೂಲದ 14 ವರ್ಷದ ಬಾಲಕ ನಾಪತ್ತೆ: ಪ್ರಕರಣ ದಾಖಲು

Spread the love

ಕಟೀಲು ಮೂಲದ 14 ವರ್ಷದ ಬಾಲಕ ನಾಪತ್ತೆ: ಪ್ರಕರಣ ದಾಖಲು

ಮಂಗಳೂರು: ಕಟೀಲು ಸಂಪೂರ್ಣ ಸಿತ್ಲಾ ಮನೆ ನಿವಾಸಿ ದಕ್ಷತ್ ಕೆ. (14) ಎಂಬ ಬಾಲಕ ನವೆಂಬರ್ 2ರಿಂದ ನಾಪತ್ತೆಯಾಗಿದ್ದು, ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಬಾಲಕನ ಚಹರೆ ಸುಮಾರು 5.6 ಅಡಿ ಎತ್ತರ, ಕಂದು ಮೈಬಣ್ಣ ಹಾಗೂ ಕೋಲು ಮುಖ ಹೊಂದಿದ್ದು, ನಾಪತ್ತೆಯಾದ ದಿನ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದನು.

ಬಾಲಕನಿಗೆ ಹಿಂದಿ, ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆ ಮಾತನಾಡಲು ಬರುತ್ತದೆ.

ಬಾಲಕನ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಬಜಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments