ಕರ್ನಾಟಕ ಬಂದ್ ವೇಳೆ ಕೋವಿಡ್-19 ತಡೆ ನಿಯಮಾವಳಿ ಉಲ್ಲಂಘಿಸಿದರೆ ಕ್ರಮ – ದಕ ಎಸ್ಪಿ ಎಚ್ಚರಿಕೆ

Spread the love

ಕರ್ನಾಟಕ ಬಂದ್ ವೇಳೆ ಕೋವಿಡ್-19 ತಡೆ ನಿಯಮಾವಳಿ ಉಲ್ಲಂಘಿಸಿದರೆ ಕ್ರಮ – ದಕ ಎಸ್ಪಿ ಎಚ್ಚರಿಕೆ

ಮಂಗಳೂರು: ಕರ್ನಾಟಕ ಬಂದ್ ವೇಳೆ ಕೋವಿಡ್-19 ತಡೆಗಾಗಿ ಇರುವ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆಗಳು ಭೂ-ಸುಧಾರಣೆ, ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಲ್ ಇಂಡಿಯ ಕಿಸಾನ್ ಸಭಾ, ರೈತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಜನಶಕ್ತಿ ಹಾಗೂ ಇನ್ನಿತರೆ ರೈತ ಸಂಘಟನೆಗಳು ಜಂಟಿಯಾಗಿ ಆಯಾ ಸ್ಥಳೀಯ ಮುಖಂಡರುಗಳು ನೇತೃತ್ವದಲ್ಲಿ ದಿನಾಂಕ 28-09-2020 ರಂದು “ಕರ್ನಾಟಕ ಬಂದ್ಗೆ ಕರೆ ನೀಡಿರಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಬಂದ್ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲೆಯಲ್ಲಿನ ಎ.ಎಸ್.ಪಿ./ಡಿವೈಎಸ್ಪಿ-3, ಸಿಪಿಐ/ಪಿಐ –8, ಪಿಎಸ್ಐ-25, ಎಎಸ್ಐ-45, ಹೆಚ್ಸಿ/ಪಿಸಿ- 320, ಗೃಹರಕ್ಷಕ ಸಿಬ್ಬಂದಿ-50 ಅಧಿಕಾರಿ ಸಿಬ್ಬಂದಿಯವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಅಲ್ಲದೆ ಇದರೊಂದಿಗೆ 3 ಕೆ ಎಸ್ ಆರ್ ಪಿ ತುಕಡಿ 03 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಬಿ.ಸಿ.ರೋಡು, ಪುತ್ತೂರು, ಕಲ್ಲಡ್ಕ, ಉಪ್ಪಿನಂಗಡಿ, ಸುಳ್ಯ ಬೆಳ್ತಂಗಡಿ ಕಡೆಗಳಲ್ಲಿ ನಿಯೋಜಿಸಿದೆ.

ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಂತೆ ಸಂಯಮದಿಂದ ವರ್ತಿಸುವಂತೆ ಹಾಗೂ ಬಲವಂತವಾಗಿ ಯಾರಾದರೂ ಬಂದ್ ಮಾಡಲು ಪ್ರಯತ್ನಿಸಿದಲ್ಲಿ ಅಥವಾ ಒತ್ತಾಯಿಸಿದ್ದಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿ ಇವರಿಗೆ ದೂರವಾಣಿ 0824 2220508 ಗೆ ಕರೆ ಮಾಡಿ ತಿಳಿಸುವಂತೆ ವಿನಂತಿಸಿದೆ. ಇದೇ ವೇಳೆಯಲ್ಲಿ ಕೋವಿಡ್-19 ತಡೆಗಾಗಿ ಇರುವ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love