ಕಲಾವಿದೆ ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ

Spread the love

ಕಲಾವಿದೆ ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ

ಮಂಗಳೂರು:ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಟಿ ಶೋಭಾ ರೈ ಅವರಿಗೆ ಚೆನ್ನೈಯ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿರ್ಸಿಟಿಯು ಗೌರವ ಡಾಕ್ಟರೇಟ್ ನೀಡಿದೆ.

ಹೊಸೂರುವಿನಲ್ಲಿರುವ ಸಂಪೂರ್ಣ ಕಾನ್ಪರೆನ್ಸ್ ಹಾಲ್‍ನಲ್ಲಿ ಜರಗಿದ ಸಮಾರಂಭ ದಲ್ಲಿ ಡಾ ಕೆ. ಅಶೋಕ್ ಕುಮಾರ್ ಶೀಬಾ ಗ್ರೇಸ್. ಡಾ ಎನ್. ಮರ್ಕಾನಂದನ್ ಅವರು ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಡಾ. ರಮಾಲಕ್ಷ್ಮೀ ಚೆಲ್ಲಪ್ಪ, ಡಾ.ಸಿ ಪೌಲ್ ಎಂಬಾನೆಜರ್, ತಿರು ಎನ್. ಜೀವನಂಥಮ್, ಬಿ.ಎಸ್ ಕಣ್ಣನ್, ಆರ್.ಬಾಲಾಜಿ, ಎಂ ಇಂದ್ರ ಕುಮಾರ್, ಪಿ ಕವಿತಾ ಉಪಸ್ಥಿತರಿದ್ದರು.

ಶೋಭಾ ರೈ ನಟಿಯಾಗಿ ಕಲೆಗೆ ನೀಡಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ಲಲಿತಕಲೆ ವಿಭಾಗದಲ್ಲಿ ಈ ಗೌರವಕ್ಕೆ ಇವರನ್ನು ಆರಿಸಲಾಗಿದೆ.


Spread the love