ಮರ ಕಡಿಯಲ್ಲ ರಸ್ತೆ ಬದಲಿಸುತ್ತೇವೆ! ಸಾಲುಮರದ ತಿಮ್ಮಕ್ಕನಿಗೆ ಎಚ್​ಡಿಕೆ ಅಭಯ!

Spread the love

ಮರ ಕಡಿಯಲ್ಲ ರಸ್ತೆ ಬದಲಿಸುತ್ತೇವೆ! ಸಾಲುಮರದ ತಿಮ್ಮಕ್ಕನಿಗೆ ಎಚ್​ಡಿಕೆ ಅಭಯ!

ಹೆದ್ದಾರಿ ನಿರ್ಮಾಣಕ್ಕಾಗಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳಿಗೆ ಕೊಡಲಿ ಏಟು ಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ ಮಾನವೀಯತೆಯಿಂದ ಸಾಲುಮರದ ತಿಮ್ಮಕ್ಕನ ಮನವಿಗೆ ಸ್ಪಂದಿಸಿ ಮರಗಳನ್ನು ರಕ್ಷಿಸಿದ್ದು, ಕುಮಾರಸ್ವಾಮಿಯವ ಈ ಕಾರ್ಯ ರಾಜ್ಯದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.

ಬಾಗೆಪಲ್ಲಿ-ಹಲಗೂರು ನಡುವೆ ಹೆದ್ದಾರಿ ನಿರ್ಮಾಣಕ್ಕಾಗಿ ಸಾಲುಮರದ ನೆರಳಿಗಾಗಿ ನೆಟ್ಟಿದ್ದ ಮರಗಳನ್ನು ಕಡಿಯುವುದಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಇದನ್ನು ತಿಳಿದ ಸಾಲುಮರದ ತಿಮ್ಮಕ್ಕ ಇಂದು ನೇರವಾಗಿ ಗೃಹಕಚೇರಿ ಕೃಷ್ಣಾಗೆ ಭೇಟಿ ನೀಡಿ ಸಿಎಂ ಕುಮಾರಸ್ವಾಮಿಯವನ್ನು ಭೇಟಿ ಮಾಡಿದ್ದರು. ಅಷ್ಟೇ ಅಲ್ಲ ಮರಗಳನ್ನು ಕಡಿಯದಂತೆ ರಕ್ಷಿಸಲು ಮನವಿ ಮಾಡಿದ್ದರು.

ಸಾಲುಮರದ ತಿಮ್ಮಕ್ಕ ಬಂದ ವೇಳೆ ಸಿಎಂ ಕುಮಾರಸ್ವಾಮಿಯವರು ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಆದರೆ ಸಾಲುಮರದ ತಿಮ್ಮಕ್ಕ ಬಂದ ವಿಚಾರ ತಿಳಿದ ಸಿಎಂ ಅಧಿಕಾರಿಗಳ ಸಭೆ ಮೊಟಕುಗೊಳಿಸಿ ತಿಮ್ಮಕ್ಕನೊಂದಿಗೆ ಮಾತನಾಡಿದ ಸಿಎಂ, ಮರ ಕಡಿಯದಂತೆ ಲೋಕೋಪಯೋಗಿ ಇಲಾಖೆಗೆ ತಕ್ಷಣ ಆದೇಶಿಸಿದ್ದಾರೆ.

ಸಿಎಂ ಕುಮಾರಸ್ವಾಮಿಯವರು ತಿಮ್ಮಕ್ಕನ ಎದುರಿದೇ PWD ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿಗೆ ಕರೆ ಮಾಡಿ ಯಾವುದೇ ಮರಗಳನ್ನು ಕಡಿಯಬೇಡಿ. ಬಾಗೆಪಲ್ಲಿ-ಹಲಗೂರು ಹೆದ್ದಾರಿಯ ತಿರುವನ್ನೇ ಬದಲಿಸಿ ಎಂದು ಸೂಚನೆ ನೀಡಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿಯವರ ಸ್ಪಂದನೆ ಹಾಗೂ ನಿರ್ಧಾರದಿಂದ ಖುಷಿಯಾದ ಪದ್ಮಶ್ರೀಪುರಸ್ಕೃತೆ ಸಾಲುಮರದ ತಿಮ್ಮಕ್ಕ, ತಕ್ಷಣ ಸಿಎಂ ಕುಮಾರಸ್ವಾಮಿಯವರಿಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿಯವರ ಈ ನಿರ್ಧಾರ ರಾಜ್ಯದಾದ್ಯಂತ ಶ್ಲಾಘನೆಗೆ ಪಾತ್ರವಾಗಿದ್ದು, ಎಲ್ಲರೂ ಸಿಎಂ ಕುಮಾರಸ್ವಾಮಿಯವರ ಮಾನವೀಯತೆಯನ್ನು ಹಾಗೂ ಖಡಕ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಾಲುಮರದ ತಿಮ್ಮಕ್ಕ, ಸಿಎಂ ಕುಮಾರಸ್ವಾಮಿಯವರ ಮಾನವೀಯತೆಯನ್ನು ಕೊಂಡಾಡಿದ್ದಾರಲ್ಲದೇ, ತಕ್ಷಣ ಸ್ಪಂದಿಸಿ ತಮ್ಮ ಬೇಡಿಕೆ ಈಡೇರಿಸಿ ಮರಗಳನ್ನು ರಕ್ಷಿಸಿದ್ದಕ್ಕೆ ಧನ್ಯವಾದ ಕೂಡ ಹೇಳಿದ್ದಾರೆ. ಇದೇ ಮೊದಲಲ್ಲ ಈ ಹಿಂದೆಯೂ ಹಲವಾರು ಬಾರಿ ಸಿಎಂ ಜನತಾದರ್ಶನ ಸೇರಿದಂತೆ ಹಲವು ಬಾರಿ ಇದೇ ರೀತಿ ತುರ್ತು ಸ್ಪಂದನೆ ಹಾಗೂ ಮಾನವೀಯತೆ ಮೆರೆದು ಶ್ಲಾಘನೆಗೆ ಪಾತ್ರವಾಗಿದ್ದಾರೆ.


Spread the love