ಕಾಂಗ್ರೆಸ್ ಸೇವಾದಳದ 10 ಉನ್ನತ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನ:  ದಿನೇಶ್ ಗುಂಡೂರಾವ್

Spread the love

ಕಾಂಗ್ರೆಸ್ ಸೇವಾದಳದ 10 ಉನ್ನತ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನ:  ದಿನೇಶ್ ಗುಂಡೂರಾವ್

ಉಡುಪಿ: ಕಾಂಗ್ರೆಸ್ ಸೇವಾದಳದ 10 ಉತ್ತಮ, ಉನ್ನತ ಕಾರ್ಯಕರ್ತರಿಗೆ ರಾಜ್ಯದ ವಿವಿಧ ನಿಗಮ, ಮಂಡಳಿಗಳಲ್ಲಿ ಸ್ಥಾನವನ್ನು ಕಾಂಗ್ರೆಸ್ ಮೀಸಲಿರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಭಾನುವಾರ ಎರ್ಮಾಳಿನ ರಾಜೀವ್ ಗಾಂಧಿ ಎಕಾಡೆಮಿ ಫಾರ್ ಪೆÇಲಿಟಿಕಲ್ ಸ್ಟಡೀಸ್ ಸಭಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜ್ಯ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಸುಭದ್ರ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರ ಅಗತ್ಯವಿದೆ. ಆಗ ಮಾತ್ರ ಜಾತ್ಯಾತೀತ ನೆಲೆಯಲ್ಲಿ ಭಾರತದ ಏಳಿಗೆ ಸಾಧ್ಯವಿದೆ. ಇದಕ್ಕೆ ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯಗಳ ಪ್ರತಿಪಾದನೆ ಅಗತ್ಯ ಎಂಬುದಾಗಿ ಗಾಂಧೀಜಿ ಅವರೂ ಪ್ರತಿಪಾದಿಸಿದ್ದರು. ಇದರ ವಿರುದ್ಧವಾಗಿ ಬಿಜೆಪಿ ನಡವಳಿಕೆಗಳು ಇಂದು ನಮಗೆ ತೋರಿಬರುತ್ತವೆ. ತಮ್ಮ ಕಾರ್ಯಲಾಭಕ್ಕಾಗಿ ಪ್ರಚೋದನೆಯ ನೀತಿಯನ್ನು ಬಿಜೆಪಿ ಇಂದು ಅನುಸರಿಸುತ್ತಿದೆ. ಬಿಜೆಪಿಗೆ ಕಾಂಗ್ರೆಸ್ಸನ್ನು ಮುಗಿಸುವುದೇ ಅವರ ಸಿದ್ಧಾಂತವಾಗಿದೆ. ಇದನ್ನೆಲ್ಲಾ ಕಾಂಗ್ರೆಸ್ ಮೀರಿ ನಿಲ್ಲುವಂತಾಗಲು ಕಾಂಗ್ರೆಸ್ ಸೇವಾದಳ, ಸೇವಾದಳದ ಯೂಥ್ ಬ್ರಿಗೇಡ್ ಹಾಗೂ ಸೇವಾದಳದ ಮಹಿಳಾ ಘಟಕಗಳು ಇನ್ನಷ್ಟು ಬಲಿಷ್ಟವಾಗಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವಾನ್ ಡಿ`ಸೋಜ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷೆ ಪ್ಯಾರಿ ಜಾನ್, ಕೆಪಿಸಿಸಿ ಪ್ರಧಾ ಕಾರ್ಯದರ್ಶಿಗಳಾದ ಎಂ. ಎ. ಗಫೂರ್, ಜಿ. ಎ. ಬಾವ, ಎಐಸಿಸಿ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ರಾಕೇಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸೇವಾದಳದ ರಾಜ್ಯ ಮಾದ್ಯಮ ಕಾರ್ಯದರ್ಶಿ ಅರ್ಜುನ್ ಗೌಡ, ರಾಜ್ಯ ಸೇವಾದಳದ ಉಪಾಧ್ಯಕ್ಷ ಗೋಪಾಲೇ ಗೌಡ ಮತ್ತಿತರರು ಉಪಸ್ಥಿತರಿದ್ದರು.


Spread the love