ಕಾಪು: ಲಾಕ್ ಡೌನ್ ಆದೇಶ ಉಲ್ಲಂಘನೆ – ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

Spread the love

ಕಾಪು: ಲಾಕ್ ಡೌನ್ ಆದೇಶ ಉಲ್ಲಂಘನೆ – ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

ಉಡುಪಿ: ರಾಜ್ಯ ಸರಕಾರ ಹೊರಡಿಸಿದ್ದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ವ್ಯಕ್ತಿಯೋರ್ವರ ಮೇಲೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ದಿನಾಂಕ ಮಾರ್ಚ್ 24 ರಿಂದಲೇ ಲಾಕ್ ಡೌನ್ ಆದೇಶ ಹೊರಡಿಸಿದ್ದು ಸರಕಾರದ ಆದೇಶ ಗಳನ್ನು ಉಲ್ಲಂಘಿಸಿ ತಿರುಗಾಡುವ ಜನರ ಬಗ್ಗೆ ನಿಗಾ ಇರಿಸಲು ಮತ್ತು ಕ್ರಮ ಕೈಗೊಳ್ಳಲುವ ಉದ್ದೇಶದಿಂದ ಐ.ಆರ್. ಗಡ್ಡೇಕರ್, ಪೊಲೀಸ್ ಉಪನಿರೀಕ್ಷಕರು ಕಾಪು ಠಾಣೆ ಮಾರ್ಚ್ 29ರಂದು ತಮ್ಮ ಇಲಾಖಾ ಹೊಯ್ಸಳ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಸರಕಾರದ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೊರೋನ ವೈರಸ್ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳದೆ  ಮಲ್ಲಾರು ಗ್ರಾಮದ ಪಕೀರಣಕಟ್ಟೆ ಎಂಬಲ್ಲಿ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ನಿವಾಸಿ ಮಹಮ್ಮದ್ ಮುಸ್ತಾಕ್ (32) ಎಂಬಾತನನ್ನು ಕಾಪು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ದ ಕಾಪು ಠಾಣೆಯಲ್ಲಿ ಕಲಂ: 279 ,269 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.


Spread the love