ಕಾಪು: ವೃದ್ಧ ಮಹಿಳೆಯ ಸರಗಳ್ಳತನ – ಇಬ್ಬರು ಆರೋಪಿಗಳ ಬಂಧನ

Spread the love

ಕಾಪು: ವೃದ್ಧ ಮಹಿಳೆಯ ಸರಗಳ್ಳತನ – ಇಬ್ಬರು ಆರೋಪಿಗಳ ಬಂಧನ

ಉಡುಪಿ: ಹುಲ್ಲು ತರಲು ಹೋಗುತ್ತಿದ್ದ ವೇಳೆ ವೃದ್ಧ ಮಹಿಳೆಯ ಕುತ್ತಿಗೆಯಿಂದ ಸರಗಳ್ಳತನ ಮಾಡಿ ಪರಾರಿಯಾದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೂಲತಃ ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಯ ಪ್ರಸ್ತುತ ಕಾಪು ಪಳ್ಳಿಗುಡ್ಡೆಯಲ್ಲಿ ವಾಸವಾಗಿರುವ ಕೃಷ್ಣ ನರಸಿಂಹ ಶಾಸ್ತ್ರಿ (27) ಮತ್ತು ವಿಜಯ ಕುಮಾರ್ (21) ಎಂದು ಗುರುತಿಸಲಾಗಿದೆ.

ಕಾಪು ಇನ್ನಂಜೆ ಗ್ರಾಮದ ನಿವಾಸಿ ಶಾಂತಾ ಆಚಾರ್ಯ ಅಕ್ಟೋಬರ್ 8 ರಂದು ದನಗಳಿಗೆ ಹುಲ್ಲು ತರಲು ಹೋಗುತ್ತಿದ್ದ ಸಮಯ ಆರೋಪಿಗಳು ಮೋಟಾರ್ ಸೈಕಲಿನಲ್ಲಿ ಬಂದು ಶಾಂತಾ ಅವರ ಕುತ್ತಿಗೆಯಲ್ಲಿನ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು ಆರೋಪಿಗಳನ್ನು ಪೊಲೀಸರು ಕಟಪಾಡಿಯಲ್ಲಿ ಶನಿವಾರ ಬಂಧಿಸಿದ್ದಾರೆ.

ಬಂಧಿತರಿಂದ ರೂ 50000 ಮೌಲ್ಯದ ಚಿನ್ನದ ಚೈನ್, ರೂ 30000 ಮೌಲ್ಯದ ಹೋಂಡಾ ಶೈನ್ ಮೋಟಾರ್ ಬೈಕ್, ರೂ 3000 ಮೌಲ್ಯದ ಎರಡು ಮೊಬೈಲ್, ನಗದು ರೂ 10000 ವಶಪಡಿಸಿಕೊಂಡಿದ್ದು ಒಟ್ಟು ರೂ 93000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ  ಕಾರ್ಯಾಚರಣೆಯನ್ನು  ನಿಶಾ ಜೇಮ್ಸ್‌, ಐ.ಪಿ.ಎಸ್.  ಪೊಲೀಸ್‌‌‌‌‌ ಅಧೀಕ್ಷಕರು  ಉಡುಪಿ ಮತ್ತು  ಕುಮಾರಚಂದ್ರ  ಹೆಚ್ಚುವರಿ ಪೊಲೀಸ್‌‌‌‌ ಅಧೀಕ್ಷಕರು ಉಡುಪಿ ರವರ  ನಿರ್ದೇಶನದಂತೆ,    ಕೆ. ಕೃಷ್ಣಕಾಂತ್‌    ಸಹಾಯಕ ಪೊಲೀಸ್‌‌‌‌ ಅಧೀಕ್ಷಕರು ಕಾರ್ಕಳ ಉಪವಿಭಾಗ, ಕಾರ್ಕಳ ರವರ ಮಾರ್ಗದರ್ಶನದಲ್ಲಿ    ಮಹೇಶ್‌ ಪ್ರಸಾದ್‌‌‌, ವೃತ್ತ ನಿರೀಕ್ಷಕರು  ಕಾಪು ವೃತ್ತ,  ಕಾಪು  ಠಾಣಾ  ಪಿ.ಎಸ್.ಐ.  ರಾಜಶೇಖರ ಬಿ. ಸಾಗನೂರು ,ಪ್ರೊಬೇಷನರಿ ಪಿಎಸ್‌ಐ ಯವರಾದ  ಉದಯರವಿ, ಸದಾಶಿವ ಗವರೋಜಿ, ಮಹದೇವ ಬೋಸ್ಲೆ ರವರು ಹಾಗೂ ಸಿಬ್ಬಂದಿಯವರಾದ ಪ್ರವೀಣ್‌ ಕುಮಾರ್‌, ರಾಜೇಶ್‌, ಸಂದೇಶ್‌, ಸುಕುಮಾರ್‌, ಜಗದೀಶ್‌, ರವಿಕುಮಾರ್, ಮಹಾಬಲ,ಸುಧಾಕರ ಬಿಜೂರು,ಸಂದೀಪ ಶೆಟ್ಟಿ, ರಾಘವೇಂದ್ರ ಜೋಗಿ,  ಆನಂದ ಹಾಗೂ ಇತರರು  ಸಹಕರಿಸಿರುತ್ತಾರೆ.


Spread the love