ಕುಂದಾಪುರ ನೆಹರೂ ಮೈದಾನದ ನೆಲ ಬಾಡಿಗೆಗೆ ತಾಲ್ಲೂಕು ರೈತ ಸಂಘ ವಿರೋಧ
ಕುಂದಾಪುರ: ಕುಂದಾಪುರದ ಯಕ್ಷಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನೆಹರೂ ಮೈದಾನ ಹಲವು ವರ್ಷಗಳಿಂದ ಕುಂದಾಪುರ ತಾಲ್ಲೂಕು ಆಡಳಿತ ಸುಪರ್ದಿಯಲ್ಲಿದ್ದು ಜನಪ್ರತಿನಿದಿನಗಳ, ಸಂಘ ಸಂಸ್ಥೆಗಳ, ಪುರಸಭೆ ಆಡಳಿತದ ಸತತ ಪ್ರಯತ್ನದಿಂದ ಕುಂದಾಪುರ ಪುರಸಭೆ ಸುಪರ್ದಿಗೆ ಅಧಿಕೃತವಾಗಿ ಹಸ್ತಾಂತರವಾಗಿದ್ದು, ಇದೀಗ ಪುರಸಭೆ ನೆಹರೂ ಮೈದಾನದಲ್ಲಿ ನಡೆಯುವ ಯಕ್ಷಗಾನ ಹಾಗೂ ಇತರೆ ಸಾಂಸ್ಕೃತಿಕ, ಕಲೆ, ಕ್ರೀಡೆ, ಕೃಷಿ ಮೇಳ ಮುಂತಾದ ಎಲ್ಲಾ ಕಾರ್ಯಕ್ರಮಗಳಿಗೆ ನೆಲ ಬಾಡಿಗೆ ಹೆಸರಿನಲ್ಲಿ ಸುಮಾರು ಐವತ್ತರಿಂದ ಅರವತ್ತು ಸಾವಿರದ ತನಕ ಹಣ ವಸೂಲಿಗೆ ಹೊರಟಿರುವ ವಿಚಾರ ತಿಳಿದುಬಂದಿದ್ದು ಇದೊಂದು ಕಲಾಭಿಮಾನಿಗಳ, ಕ್ರೀಡಾ ಆಸಕ್ತರ, ಕೃಷಿಕರ ವಿರೋಧಿ ನಿಲುವಾಗಿದ್ದು ಕುಂದಾಪುರ ತಾಲ್ಲೂಕು ರೈತ ಸಂಘ ಪುರಸಭೆಯ ಈ ಕ್ರಮವನ್ನು ವಿರೋಧಿಸುತ್ತದೆ.
ನೆಹರೂ ಮೈದಾನದಲ್ಲಿ ಇಲ್ಲಿಯ ತನಕ ಯಾವುದೇ ಸ್ವಚ್ಛತೆ, ನೈರ್ಮಲ್ಯ, ಶೌಚಾಲಯ, ಬಯಲು ರಂಗ ಮಂಟಪ ಇತ್ಯಾದಿ ಯಾವುದಕ್ಕೂ ಕ್ರಮವಹಿಸದ ಪುರಸಭೆ ಹಾಗೂ ತಾಲ್ಲೂಕು ಆಡಳಿತ ಈಗ ನೆಲಬಾಡಿಗೆ ಹೆಸರಿನಲ್ಲಿ ವಸೂಲಿಗೆ ಹೊರಟಿರುವ ಕ್ರಮವನ್ನು ಕೂಡಲೇ ಕೈಬಿಡಬೇಕು ಇಲ್ಲದೆ ಇದ್ದರೆ ಇದರ ವಿರುದ್ಧ ಉಗ್ರಹೋರಾಟ ಮಾಡುತ್ತೇವೆ ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.













