ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡಿದ ಸಮವಸ್ತ್ರಧಾರಿ ಟ್ರಾಫಿಕ್ ಪೇದೆ!

Spread the love

ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡಿದ ಸಮವಸ್ತ್ರಧಾರಿ ಟ್ರಾಫಿಕ್ ಪೇದೆ!

ಮಂಗಳೂರು: ಸಮವಸ್ತ್ರ ಸಹಿತ ಕರ್ತವ್ಯ ನಿರತ ಟ್ರಾಫಿಕ್ ಪೇದೆಯೋರ್ವ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಂಡೇಶ್ವರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಅಶೋಕ್ ಗೌಡ ಕುಡಿದು ರಸ್ತೆಯಲ್ಲಿ ತೂರಾಡಿದ್ದಾರೆ.

ಮಾಹಿತಿಗಳ ಪ್ರಕಾರ ಲಾಲ್ ಬಾಗ್ ಬಳಿ ಅಶೋಕ್ ಗೌಡರಿಗೆ ಟ್ರಾಫಿಕ್ ಕೆಲಸಕ್ಕೆ ನಿಯೋಜಿಸಲಾಗಿತ್ತು. ಕೆಲಸ ಮುಗಿದ ಬಳಿಕ ಅಶೋಕ್ ಕುಡಿದು ರಸ್ತೆಯಲ್ಲಿ ತೂರಾಡುತ್ತ ಸಂಚರಿಸುವ ಪಾದಾಚಾರಿಗಳಿಗೆ ತೊಂದರೆ ಉಂಟು ಮಾಡಿತ್ತಿದ್ದರು ಎನ್ನಲಾಗಿದೆ. ಅಲ್ಲಿ ಸೇರಿದ್ದ ಕೆಲವೊಂದು ಯುವಕರು ಅಶೋಕ್ ಗೌಡರಿಗೆ ರಸ್ತೆ ಬದಿಯಲ್ಲಿ ಬರಲು ಸೂಚಿಸಿದ್ದರು ಎನ್ನಲಾಗಿದೆ. ಈ ನಡುವೆ ಕೆಲವೊಂದ ವ್ಯಕ್ತಿಗಳು ಪೋಲಿಸಪ್ಪನ ಅವಸ್ಥೆಯನ್ನು ಮೊಬೈಲಿನಲ್ಲಿ ಚಿತ್ರಿಕರೀಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಈ ಕುರಿತು ಟ್ರಾಫಿಕ್ ಎಸಿಪಿಯವರನ್ನು ಸಂಪರ್ಕಿಸಿದಾಗ ಅಶೋಕ್ ಅವರು ಒಂದು ವಾರದ ರಜೆಯಲ್ಲಿದ್ದು, ಅವರು ಮದ್ಯ ವ್ಯಸನಿಯಾಗಿದ್ದರು. ಕಳೆದ ವಾರವಷ್ಠೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೂಡ ಸೇರಿಸಲಾಗಿತ್ತು. ಬುಧವಾರಷ್ಟೆ ಅಶೋಕ್ ಅವರು ಕೆಲಸಕ್ಕೆ ಬಂದಿದ್ದು, ಲಾಲ್ ಬಾಗ್ ಬಳಿ ಅವರಿಗೆ ನಿಯೋಜಿಸಲಾಗಿತ್ತು. ಇವರ ಈ ವರ್ತನೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಸಾರ್ವಜನಿಕ ಸೇವೆಯಲ್ಲಿದ್ದ ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ವರ್ತನೆಯಿಂದ ಹಾಸ್ಯಸ್ಪದವಾಗಿರುವುದು ಬೇಸರದ ಸಂಗತಿ


Spread the love