ಕೃಷ್ಣಮಠ ಪರಿಸರದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಅಷ್ಟ ಮಠದ ದಿವಾನರೊಂದಿಗೆ ಸಮಾಲೋಚನೆ ಸಭೆ

Spread the love

ಕೃಷ್ಣಮಠ ಪರಿಸರದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಅಷ್ಟ ಮಠದ ದಿವಾನರೊಂದಿಗೆ ಸಮಾಲೋಚನೆ ಸಭೆ

ಉಡುಪಿ: ನಗರಸಭೆ ಕಚೇರಿಯಲ್ಲಿ ಕೃಷ್ಣ ಮಠದ ಪರಿಸರದ ಮೂಲ ಸೌಕರ್ಯ ಅಭಿವೃದ್ಧಿ ನಡೆಸುವ ಬಗ್ಗೆ ಅಷ್ಟ ಮಠದ ದಿವಾನ ರೊಂದಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಮಾಲೋಚನಾ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ರಥಬೀದಿ ಪರಿಸರದ ಚರಂಡಿ, ಒಳ ಚರಂಡಿ ವ್ಯವಸ್ಥೆ, ದಾರಿದೀಪ ಮುಂತಾದ ಮೂಲ ಸೌಕರ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಭವಿಷ್ಯದ 50 ವರ್ಷಗಳ ದೂರದೃಷ್ಟಿಯ ಚಿಂತನೆಯೊಂದಿಗೆ ಅಭಿವೃದ್ಧಿ ನಡೆಸುವ ನಿಟ್ಟಿನಲ್ಲಿ ಮಠದ ದಿವಾನರು ತಮ್ಮ ಸಲಹೆ ಸೂಚನೆ ನೀಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಕೃಷ್ಣ ಮಠದ ಪಾರಂಪರಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ, ವ್ಯವಸ್ಥಿತ ಚರಂಡಿ ಹಾಗೂ ಒಳ ಚರಂಡಿ ವ್ಯವಸ್ಥೆಗೆ ನಗರಸಭೆಯ ಮೂಲಕ ತಾಂತ್ರಿಕ ಪರಿಣಿತರ ಮೂಲಕ ನೀಲನಕ್ಷೆ ತಯಾರಿಸಿ, ಅಷ್ಟ ಮಠಗಳ ಸ್ವಾಮೀಜಿಯವರ ಸಲಹೆ ಸೂಚನೆಗಳನ್ನು ಪರಿಗಣಿಸಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಿದ್ದು, ಕೃಷ್ಣ ಮಠಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಸಲು ಸರ್ವರ ಸಹಕಾರ ಕೋರಿದರು.

ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ  ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ   ಸುಂದರ ಕಲ್ಮಾಡಿ, ಪೌರಾಯುಕ್ತರಾದ  ಮಹೇಶ್, ನಗರಸಭಾ ಸದಸ್ಯರಾದ   ಗಿರೀಶ್ ಅಂಚನ್,  ಮಾನಸ ಸಿ. ಪೈ,  ಗಿರಿಧರ ಕರಂಬಳ್ಳಿ,  ಟಿ. ಜಿ. ಹೆಗ್ಡೆ,  ಬಾಲಕೃಷ್ಣ ಶೆಟ್ಟಿ, ಪ್ರಮುಖರಾದ   ಶ್ಯಾಮ ಪ್ರಸಾದ್ ಕುಡ್ವ,   ಹರೀಶ್ ಬೈಲಕೆರೆ, ಅಷ್ಟ ಮಠದ ದಿವಾನರು, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರ್ಗಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


Spread the love