ಕೆಎಂಸಿ ಅತ್ತಾವರ ರಜತ ಸಂಭ್ರಮ ಕೊಡುಗೆ – ಬಿಪಿಎಲ್ ಕುಟುಂಬಿಕರಿಗೆ 25 ಸಾವಿರ ವರೆಗೆ ಉಚಿತ ವೈದಕೀಯ ಸವಲತ್ತುಗಳು

Spread the love

ಕೆಎಂಸಿ ಅತ್ತಾವರ ರಜತ ಸಂಭ್ರಮ ಕೊಡುಗೆ – ಬಿಪಿಎಲ್ ಕುಟುಂಬಿಕರಿಗೆ 25 ಸಾವಿರ ವರೆಗೆ ಉಚಿತ ವೈದಕೀಯ ಸವಲತ್ತುಗಳು

ಮಂಗಳೂರು: ಡಾ| ಟಿ.ಎಂ.ಪೈ ಅವರ ಕನಸನ್ನು ಅನುಸರಿಸಿ ಸಮಾಜವನ್ನು ಕಾಡುವ ಮೂರು ಪ್ರಮುಖ ಸಮಸ್ಯೆಗಳಾದ ಅನಾರೋಗ್ಯ, ಅನಕ್ಷರತೆ ಹಾಗೂ ಬಡತನ ನಿರ್ಮೂಲನೆ ಮಾಡಲು ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಕೆಎಮ್ ಸಿ ಆಸ್ಪತ್ರೆಗಳ ಸಮೂಹವು ಈ ನಿಟ್ಟಿನಲ್ಲಿ ಬಿಪಿಎಲ್ ಕುಟುಂಬಸ್ಥರಿಗೆ ರೂ 25 ಸಾವಿರ ವರೆಗಿನ ಉಚಿತ ವೈದ್ಯಕೀಯ ಸವಲತ್ತುಗಳನ್ನು ರಜತ ಮಹೋತ್ಸವದ ವಿಶೇಷ ಕೊಡುಗೆಯಾಗಿ ನೀಡಲಾಗುತ್ತದೆ ಎಂದು ಕೆಎಂಸಿ ಆಸ್ಪತ್ರೆ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ್ ವೇಣುಗೋಪಾಲ್ ಹೇಳಿದರು.

ಮಂಗಳೂರಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆಎಂಸಿ ಆಸ್ಪತ್ರೆಯ ರಜತ ಮಹೋತ್ಸವದ ಸಂದರ್ಭದಲ್ಲಿ ದಕ ಜಿಲ್ಲಾ ವ್ಯಾಪ್ತಿಯಲ್ಲಿರುವ ಬಡತನ ರೇಖೆಗಿಂತ ಕೆಳಗಿನ ಬಿಪಿಎಲ್ ಕುಟುಂಬಗಳಿಗೆ ಈ ಸೌಲಬ್ಯ ನೀಡಲಾಗುವುದು ಎಂದರು.

ಯು ಎಸ್ ಶ್ರೀಪತಿ ಮಾತನಾಡಿ ಕಳೆದ 25 ವರ್ಷಗಳಿಂದ ಕೆಎಂಸಿ ಅತ್ತಾವರ ಆಸ್ಪತ್ರೆ ಸೇವೆ ನೀಡಿಕೊಂಡು ಬಂದಿದ್ದು, ಪ್ರಸ್ತುತ ಬಿಪಿಎಲ್ ಕಾರ್ಡುದಾರರಿಗೆ ಅನ್ವಯಗೊಂಡು ನೋಂದಾಯಿತ ಕುಟಂಬಗಳಿಗೆ ಉಚಿತವಾಗಿ ರೂ 25 ವರೆಗಿನ ಚಿಕಿತ್ಸಾ ಸೌಲಭ್ಯವನ್ನು ನೀಡಲು ನಿರ್ಧರಿಸಲಾಗಿದೆ. ನೋಂದಾಯಿತ ಕುಟುಂಬದ ಯಾವುದೇ ಸದಸ್ಯ ಅಥವಾ ಸದಸ್ಯರು ರೋಗ ನಿಮಿತ್ತ ಅಥವಾ ಅಫಘಾತಕ್ಕೊಳಗಾಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದಾಗ ರೂ 25 ಸಾವಿರ ವರೆಗಿನ ವೈದ್ಯಕೀಯ ವೆಚ್ಚದ ಸವಲತ್ತನ್ನು ಷರತ್ತುಗಳನ್ನೊಳಗೊಂಡು ಭರಿಸಲಾಗುವುದು. ರೂ 25 ಸಾವಿರದ ಮಿತಿಯು ಇಡೀ ಕುಟುಂಬವೊಂದಕ್ಕೆ ಸೀಮಿತವಾಗಿದ್ದು, ಇದೇ ವ್ಯಕ್ತಿಗತ ಆಗಿರುವುದಿಲ್ಲ. ಯೋಜನೆಯ ಸವಲತ್ತುಗಳು ಮಂಗಳೂರಿನ ಕೆಎಂಸಿ ಅತ್ತಾವರದಲ್ಲಿ ಮಾತ್ರ ಲಭ್ಯವಿರುವುದು ಹಾಗೂ ಈ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನ ಮಾತ್ರ ನೀಡಲಾಗುವುದು. ಈ ಯೋಜನೆಯ ಸದಸ್ಯರು ಜನರಲ್ ವಾರ್ಡಿನಲ್ಲಿ ಮಾತ್ರ ದಾಖಲಾಗಲು ಅರ್ಹರಾಗಿರುತ್ತಾರೆ ಎಂದರು.

ಈ ವಿಶೇಷ ಸವಲತ್ತುಗಳನ್ನು ಪಡೆಯಲು ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ. ಹಣ ಪಾವತಿ ರಹಿತ ನಿರ್ವಹಣಾ ಸೌಲಭ್ಯ, ಈಗಾಗಲೇ ಡಯಾಬಿಟಿಸ್ ಬ್ಲಡ್ ಪ್ರಶರ್, ಮುಂತಾದ ರೋಗವಿದ್ದವರೂ ಈ ಯೋಜನೆಯಲ್ಲಿ ಸವಲತ್ತು ವಯೋಮಿತಿ 91 ದಿವಸದ ಶಿಶುವಿನಿಂದ 85 ವರ್ಷದವರೆಗೆ ಈ ಯೋಜನೆಗೆ ಸೇರಲು ಅವಕಾಶವಿರುತ್ತದೆ ಹಾಗೂ ಪ್ರತಿಯೋಂದು ಕುಟುಂಬಕ್ಕೆ ಗುರುತು ಕಾರ್ಡ್ ನೀಡಲಾಗುವುದು ಎಂದರು.

ಕೇವಲ ಒಳರೋಗಿಯಾಗಿ ದಾಖಲಾದಲ್ಲಿ ಮಾತ್ರವಲ್ಲದೆ ಹೊರರೋಗಿಗಳಾಗಿ ಕೂಡ ರಿಯಾಯತಿಗಳನ್ನು ಪಡೆಯಬಹುದು. ಈ ಯೋಜನೆಯ ಮೂಲಕ ತಜ್ಞ ವೈದ್ಯರ ಜೊತೆಗಿನ ಕನ್ಸಲ್ಟೇಷನ್ 100% ರಿಯಾಯತಿಯನ್ನು ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ನೀಡಲಾಗಿದೆ ಡಯಾಗ್ನಾಸ್ಟಿಕ್ ಟೆಸ್ಟ್ ಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳಿಗೆ ಸದಸ್ಯರು 25% ರಿಯಾಯತಿಯನ್ನು  ಪಡೆಯಬಹುದು ಹಾಗೂ ಆಸ್ಪತ್ರೆಯಿಂದ ಖರೀದಿಸುವ ಔಷದಿಗಳ ಮೇಲೆ 10% ರಷ್ಟು ರಿಯಾಯತಿಯ ಸೌಲಭ್ಯ ಇರುತ್ತದೆ ಎಂದು ಹೇಳಿದರು.

ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ಬಿಪಿಎಲ್ ಕುಟುಂಬಗಳು ಈ ಸದಾವಕಾಶವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡಿನ ಒಂದು ಜೆರಾಕ್ಸ್ ಪ್ರತಿಯೊಂದಿಗೆ ಕೆಎಂಸಿ ಆಸ್ಪತ್ರೆ ಅತ್ತಾವರದ ಕೆಳಮಹಡಿಯಲ್ಲಿರುವ ಸಹಾಯ ಕೇಂದ್ರವನ್ನು ಮಧ್ಯಾಹ್ನ 1.40 ರಿಂದ ಸಂಜೆ 4.30 ವರೆಗೆ ಸಂಪರ್ಕಿಸಬಹುದು. ನೋಂದಾವಣೆ ಪ್ರಕ್ರಿಯೆಯು 21 ನೇ ಅಗಸ್ಟ್ 2017 ರ ವರೆಗೆ ಜಾರಿಯಲ್ಲಿರುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅಪರೇಶನ್ಸ್ ವಿಭಾಗದ ಸಿನೀಯರ್ ಮ್ಯಾನೇಜರ್ ರವಿರಾಜ್, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ರಾಕೇಶ್ ಉಪಸ್ಥಿತರಿದ್ದರು.


Spread the love