ಕೆತ್ತಿಕ್ಕಲ್ ನಲ್ಲಿ ಗುಡ್ಡ ಕುಸಿತ: ಸಂಚಾರಕ್ಕೆ ಸಮಸ್ಯೆ

Spread the love

ಕೆತ್ತಿಕ್ಕಲ್ ನಲ್ಲಿ ಗುಡ್ಡ ಕುಸಿತ: ಸಂಚಾರಕ್ಕೆ ಸಮಸ್ಯೆ

ಮಂಗಳೂರು: ಕೆಲವು ವರ್ಷದ ಹಿಂದೆ ಭೂ ಕುಸಿತದ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದ ಕೆತ್ತಿಕ್ಕಲ್ ಪ್ರದೇಶದಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಸಂಭವಿಸಿದೆ.

ಇದರಿಂದ ಕೆತ್ತಿಕ್ಕಲ್ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ರಾತ್ರಿ ಸುಮಾರು 7.30ರ ವೇಳೆಗೆ ಗುಡ್ಡ ಕುಸಿದು ಮುಖ್ಯರಸ್ತೆಗೆ ಮಣ್ಣು, ಕಲ್ಲು ಬಿದ್ದಿದೆ. ಜೊತೆಗೆ ಮಳೆನೀರು ಇಳಿಜಾರು ಪ್ರದೇಶದಿಂದ ಹರಿದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಜೋಕಟ್ಟೆ – ಪಡೀಲು ರೈಲು ಹಳಿ ಮಾರ್ಗದಲ್ಲಿ ಭೂ ಕುಸಿತ
ನಗರ ಹೊರವಲಯದ ಪಡೀಲ್ ಮತ್ತು ಜೋಕಟ್ಟೆ ನಡುವಿನ ರೈಲು ಹಳಿ ಮಾರ್ಗದಲ್ಲಿ ಶನಿವಾರ ಸಂಜೆ ಸುಮಾರು 5 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಸುಮಾರು ಒಂದು ತಾಸಿನ ಬಳಿಕ ಒಂದು ರೈಲು ಮಾರ್ಗ ಗಂಟೆಗೆ 50 ಕಿ.ಮೀ. ವೇಗದಲ್ಲಿ ಪೂರ್ಣ ರೂಪದಲ್ಲಿ ಕಾರ್ಯಾಚರಿಸಲು ಆರಂಭಿಸಿದೆ.

ಭೂ ಕುಸಿತ ಸಂಭವಿಸಿದ ಬಳಿಕ ರಾತ್ರಿ ತನಕ ಈ ಮಾರ್ಗದಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಿವೆ.

 

 


Spread the love