ಕೆಸಿಎಫ್ ದುಬೈ ನಾರ್ತ್ ಝೋನ್ ಅತ್ತಬ್’ಶೀರ್ ಸ್ನೇಹ ಸಮ್ಮಿಲನ ಮತ್ತು ಮೀಲಾದ್ ಪ್ರಚಾರ ಸಂಗಮ

Spread the love

ಕೆಸಿಎಫ್ ದುಬೈ ನಾರ್ತ್ ಝೋನ್ ಅತ್ತಬ್’ಶೀರ್ ಸ್ನೇಹ ಸಮ್ಮಿಲನ ಮತ್ತು ಮೀಲಾದ್ ಪ್ರಚಾರ ಸಂಗಮ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನೋರ್ತ್ ಝೋನ್ ವತಿಯಿಂದ ತನ್ನ 25 ಶಾಖೆಗಳ ರಚನೆ ಪೂರ್ಣಗೊಂಡ ಪ್ರಯುಕ್ತ ಅತ್ತಬ್’ಶೀರ್ ಸ್ನೇಹ ಸಮ್ಮಿಲನ ಮತ್ತು ಮೀಲಾದ್ ಪ್ರಚಾರ ಸಂಗಮವನ್ನು ಗುರುವಾರ ರಾತ್ರಿ ದುಬೈಯ ಅಬ್ರದಲ್ಲಿರುವ ಬೋಟ್ ಹೌಸ್ ನಲ್ಲಿ ಝೋನ್ ಅಧ್ಯಕ್ಷ ಇಸ್ಮಾಯಿಲ್ ಮದನಿ ನಗರ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕೆ.ಸಿ.ಎಫ್ ಇದರ ಅಂತರಾಷ್ಟ್ರೀಯ ಸಮಿತಿಯ ಫೈನಾನ್ಸಿಯಲ್ ಕಂಟ್ರೋಲರ್ ಬಹು ಅಬ್ದುಲ್ ಹಮೀದ್ ಸಅದಿ ಈಶ್ವರ ಮಂಗಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಫಝಲ್ ತಂಗಳ್ ರವರು ದುವಾ ಮತ್ತು ಆರ್ಶಿವಚನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಅಲ್ ಖಾದಿಸಾ ಎಜುಕೇಶನಲ್ ಆಕಾಡೆಮಿ ಇದರ ಪ್ರಾಂಶುಪಾಲರಾದ ಹಾಫಿಝ್ ಸುಫಿಯಾನ್ ಸಖಾಫಿ ರವರು ಮಾತನಾಡಿ ಕೆ.ಸಿ.ಎಫ್ ಅನಿವಾಸಿ ಸದಸ್ಯರನ್ನು ಒಗ್ಗೂಡಿಸಿಕೊಂಡು ಮಾಡುತ್ತಿರುವ ಸಂಘಟನಾ ಕಾರ್ಯಚಟುವಟಿಕೆಗಳು ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮದ್ರಸ ಮತ್ತು ಮಸೀದಿಗಳ ಅಭಿವೃದ್ದಿ ಹಾಗೂ ಧಾರ್ಮಿಕ ಪ್ರಜ್ಞಾವಂತಿಕೆ ಮೂಡಿಸುವ ಕಾರ್ಯಗಳಿಗೆ ನೀಡುತ್ತಿರುವ ಸಹಕಾರಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಘಟನೆಯನ್ನು ಕಟ್ಟಿಬೆಳಸುವಲ್ಲಿ ಕಾರ್ಯಕರ್ತರು ಮಾಡುತ್ತಿರುವ ಪರಿಶ್ರಮಗಳನ್ನು ಶ್ಲಾಘಿಸಿ ಅವರ ಪ್ರಯತ್ನಗಳನ್ನು ಅಲ್ಲಾಹನು ಸ್ವೀಕರಿಸಲಿ ಎಂದು ದುಆ ಮಾಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಅಬ್ದುಲ್ ಜಲೀಲ್ ನಿಝಾಮಿ, ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಬ್ರೈಟ್, ಸಂಘಟನಾ ಅಧ್ಯಕ್ಷರಾದ ಕಾಜೂರ್ ಇಕ್ಬಾಲ್, ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಮುಸ್ತಫಾ ನಈಮಿ ಮೊಂಟುಗೊಳಿ, ಅಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ಲಾ ಉಸ್ತಾದ್ ಶುಭ ಹಾರೈಸಿ ಮಾತನಾಡಿ, 25 ಶಾಖೆಗಳು ಇನ್ನಷ್ಟು ಕ್ರಿಯಾಶೀಲವಾಗಿ ಬೆಳೆದು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಇಬ್ರಾಹಿಂ ಮದನಿ ಸಾಮಣಿಗೆ ನೇತ್ರತ್ವದಲ್ಲಿ ಮೀಲಾದ್ ಸಮಾವೇಶದ ಪೋಸ್ಟರ್ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಿತು. ಕೆಸಿಎಫ್ ದುಬೈ ನಾರ್ತ್ ಝೋನ್ ಅಧೀನದ ನಾಲ್ಕು ಸೆಕ್ಟರ್‍ ಗಳ ವ್ಯಾಪ್ತಿಯಲ್ಲಿ ಬರುವ 25 ಶಾಖೆಗಳ ಪದಾಧಿಕಾರಿಗಳು ಮತ್ತು ಇತರ ಪ್ರಮುಖ ನಾಯಕರುಗಳು ಭಾಗವಹಿಸಿದ್ದರು. ರಿಯಾಝ್ ಕೊಂಡಂಗೇರಿ ರವರು ಅತಿಥಿಗಳನ್ನು ಸ್ವಾಗತಿಸಿ, ಅಬ್ದುಲ್ ಅಝೀಝ್ ಲತೀಫಿರವರು ಧನ್ಯವಾದವಿತ್ತರು. ದುಬೈ ಯಲ್ಲಿನ ಕೃತಕ ನದಿಯ ಮದ್ಯ ಭಾಗದಲ್ಲಿ ಬೋಟ್ ನಲ್ಲಿ ನಡೆದ ಕಾರ್ಯಕ್ರಮವು ದುಬೈಯ ವಿವಿಧ ಕಡೆಗಳಿದ ಆಗಮಿಸಿದ ಕಾರ್ಯಕರ್ತರಿಗೆ ಹೊಸ ಹುರುಪನ್ನು ಮೂಡಿಸಿತ್ತು.


Spread the love