ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಕೊಂಕಣಿ ವಿವಿಧ ಮನೋರಂಜನಾ ಸ್ಪರ್ಧೆಗಳು

Spread the love

ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಕೊಂಕಣಿ ವಿವಿಧ ಮನೋರಂಜನಾ ಸ್ಪರ್ಧೆಗಳು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಮಾಂಡ್‌ ಸೊಭಾಣ್‌ (ರಿ.) ಇವರ ಸಹಯೋಗದಲ್ಲಿ ದಿನಾಂಕ 20.08.2025ರಂದು ಬೆಳಿಗ್ಗೆ 9.00ರಿಂದ ಸಂಜೆ 4.00ರವರೆಗೆ ಶಕ್ತಿನಗರದ ಕಲಾಂಗಣ್‌ ಸಭಾಂಗಣದಲ್ಲಿ ಕೊಂಕಣಿಯ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಕೊಂಕಣಿಯ ದ್ವಜರೋಹಣದ ಮೂಲಕ ವೈಭವಯುತವಾಗಿ ಆಚರಿಸಲಿದೆ.

ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭದೊಂದಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ 4.00 ಗಂಟೆಗೆ ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಸಮಾರೋಪ ಸಮಾರಂಭವನ್ನು ಆಚರಿಸಲಿದೆ.

ಪ್ರೌಢ ಶಾಲೆ (8ನೇ ತರಗತಿಯಿಂದ 10ನೇ ತರಗತಿ) ಮತ್ತು ಕಾಲೇಜು ವಿಭಾಗಗಳಲ್ಲಿ (ಪಿಯುಸಿ ಮತ್ತು ಪದವಿ ಜೊತೆಯಾಗಿ ಹಾಗೂ ಇತರೆ ಕೋರ್ಸುಗಳು ಸೇರಿ) ಈ ಸ್ಪರ್ಧೆಯು ನಡೆಯಲಿದ್ದು, ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿರ್ಧಿಷ್ಟ ತಂಡಗಳು ಕಾರ್ಯನಿರ್ವಹಣೆ, ಕಿರುನಾಟಕ, ಭಾವಗೀತೆ, ಕಾಮಿಡಿ, ವೊವಿಯೊ, ಗುಮಟ್‌, ಸಂಗೀತ, ನೃತ್ಯ ಇತ್ಯಾದಿಗಳನ್ನು ಪ್ರದರ್ಶಿಸಬಹುದು. ಕಾರ್ಯನಿರ್ವಾಹಕರು (ಎಂ.ಸಿ.) ಸೇರಿದಂತೆ ತಂಡದಲ್ಲಿ ಕನಿಷ್ಟ 10, ಗರಿಷ್ಟ 15 ಸದಸ್ಯರು ಇರಬೇಕು. ಕಾರ್ಯಕ್ರಮದ ದಿನದಂದು ಬೆಳಿಗ್ಗೆ 9.00 ಗಂಟೆಗೆ ಪ್ರದರ್ಶನದ ಅನುಕ್ರಮವನ್ನು (LOTS) ತಿಳಿಸಲಾಗುವುದು. ಸ್ಪರ್ಧೆಗಳು ಸರಿಯಾಗಿ 10.00 ಗಂಟೆಗೆ ಪ್ರಾರಂಭವಾಗುತ್ತವೆ. ತಂಡದ ಉತ್ತಮ ಪ್ರದರ್ಶನಕ್ಕೆ ಆಕರ್ಷಕ ನಗದು ಬಹುಮಾನ ಹಾಗೂ ಅತ್ಯುತ್ತಮ ನಿರೂಪಕರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು.

ಆಸಕ್ತ ಶಾಲಾ- ಕಾಲೇಜು ಸಂಸ್ಥೆಗಳು ತಮ್ಮ ಸಂಸ್ಥೆ ವತಿಯಿಂದ ಸ್ಪರ್ಧಿಸುವ ಹೆಸರುಗಳನ್ನು ನೋಂದಾಯಿಸಲು ಕೊನೆಯ ದಿನಾಂಕ 16 ಆಗಸ್ಟ್‌ 2025 ಸಂಜೆ 5.30ರ ಒಳಗೆ. ನೋಂದಾಯಿಸುವ ಹೆಸರುಗಳನ್ನು ರಿಜಿಸ್ಟ್ರಾರ್‌, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ ಭಾಗ್‌, ಮಂಗಳೂರು-575003 ಅಥವಾ Kksa1994@gmail.com ಇ- ಮೇಯ್ಲ್‌ ಮೂಲಕ ನೋಂದಾಯಿಸಬಹುದು.


Spread the love
Subscribe
Notify of

0 Comments
Inline Feedbacks
View all comments