ಕೊಂಚಾಡಿ ಕಾಶೀ ಮಠದಲ್ಲಿ ರಾಮಾಯಣ ಕಥಾ ಪ್ರವಚನ ಪಾರಾಯಣ ಪ್ರಾರಂಭ

Spread the love

ಕೊಂಚಾಡಿ ಕಾಶೀ ಮಠದಲ್ಲಿ ರಾಮಾಯಣ ಕಥಾ ಪ್ರವಚನ ಪಾರಾಯಣ ಪ್ರಾರಂಭ

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಪ್ರಾರಂಭಗೊಂಡಿದ್ದು ಈ ಸಂದರ್ಭದಲ್ಲಿ ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪಾರಾಯಣಗಳು ನಡೆಯಲಿವೆ.

ಈ ಪುಣ್ಯಪ್ರದ ಶ್ರಾವಣ ಮಾಸದ ಪ್ರಾರಂಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ಲೀಲೆ – ವೈಭವ , ದೇವರ ಚರಿತ್ರೆ ” ಶ್ರೀ ರಾಮಾಯಣ ಪಾರಾಯಣ ಹಾಗೂ ಪ್ರವಚನ 9 ದಿನಗಳ ಪರ್ಯಂತ ಕೊಂಚಾಡಿ ಕಾಶಿ ಮಠದಲ್ಲಿ ಜರುಗಲಿರುವುದು. ಆಗಸ್ಟ್ ೪ರಂದು ಖುಗೋಪಾಕರ್ಮ, ಆಗಸ್ಟ್ ೧೧ ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಇದಲ್ಲದೇ ಆಗಸ್ಟ್ ೨೨ -೨೬ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ ೧ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ. ಸೆಪ್ಟಂಬರ್ 18 ರಿಂದ ಅಧಿಕಮಾಸ ಪ್ರಾರಂಭ , ಅಕ್ಟೋಬರ್ ೧೭ ರಿಂದ ನವರಾತ್ರಿ ಆಚರಣೆ ಪ್ರಾರಂಭವಾಗಲಿದ್ದು ಅಕ್ಟೋಬರ್ 28 ರ ವರೆಗೆ ವಿವಿಧ ವಾಹನ ಪೂಜಾ ಸೇವೆಗಳು ನಡೆಯಲಿರುವುದು .

ಈ ಬಾರಿ ಕೊರೊನ ಸೋಂಕು ದಿನೇ ದಿನೇ ಹೆಚ್ಚು ಹರಡುತಿದ್ದು ಕೋವಿಡ್-19 (ಕೊರೋನ ವೈರಾಣು) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡುವುದು ಕಷ್ಟವಾಗುವುದರಿಂದ ಭಕ್ತಾದಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಭಂದಿಸಲಾಗಿದೆ. ಸರ್ಕಾರದ ಅನ್ವಯದಂತೆ ಶ್ರೀ ದೇವಳದಲ್ಲಿ ಸುರಕ್ಷತಾ ದೃಷ್ಠಿಯನುಸಾರ ಕೈಗೊಳ್ಳ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳು ಈ ಕೆಳಗಿನಂತಿದ್ದು ಕಡ್ಡಾಯವಾಗಿ ಪಾಲಿಸ ಬೇಕಾಗಿ ವಿನಂತಿ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾದಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು

ಚಿತ್ರ : ಮಂಜು ನೀರೇಶ್ವಾಲ್ಯ


Spread the love