ಕೊರೋನಾ ವೈರಸ್: ಮಸೀದಿ, ದರ್ಗಾ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ

Spread the love

ಕೊರೋನಾ ವೈರಸ್: ಮಸೀದಿ, ದರ್ಗಾ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ

ಬೆಂಗಳೂರು: ಮಾರಕ ಕೊರೋನಾ ವೈರಸ್ ಲಾಕ್ ಡೌನ್ 5.0 ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಅಲ್ಪ ಸಂಖ್ಯಾತರ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಜೂನ್ 8ರಿಂದ ಮಸೀದಿ, ದರ್ಗಾ ತೆರೆಯಲು ಅನುಮತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅಲ್ಪಸಂಖ್ಯಾತ ಆಯೋಗ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಪ್ರಮುಖಾಂಶಗಳು ಇಂತಿದೆ
1.ಎಲ್ಲರೂ ಮನೆಯಲ್ಲೇ ಸ್ವಚ್ಛತೆ ಮಾಡಿಕೊಂಡು ಬರಬೇಕು.
2.ಮಸೀದಿ ಆವರಣದಲ್ಲಿ ಈಜುಕೊಳದ ಬದಲು ನಲ್ಲಿ ಬಳಕೆ.
3.ಶೌಚಾಲಯಗಳನ್ನು ಶುಚಿಯಾಗಿ ಇಡಬೇಕು
4.ಮಸೀದಿಯ ಒಳಗೆ, ಹೊರಗೆ ಹೋಗಲು ಒಂದೇ ದ್ವಾರ
5.ಪ್ರಾರ್ಥನೆಗೂ ಮುನ್ನ ಸಭಾಂಗಣದಲ್ಲಿ ಫ್ಯೂಮಿಗೇಷನ್ (ರಾಸಾಯನಿಕ ಗ್ಯಾಸ್ ಸಿಂಪಡಣೆ ಮೂಲಕ ಸೋಂಕು ನಿವಾರಣೆ) ಕಡ್ಡಾಯ
6.ಪ್ರಾರ್ಥನಾ ಸಭಾಂಗಣದ ಪ್ರವೇಶಕ್ಕೂ ಮುನ್ನ ಪರೀಕ್ಷೆ ಎಲ್ಲರ ದೇಹದ ಉಷ್ಣಾಂಶ ಪರೀಕ್ಷೆ ಕಡ್ಡಾಯ
7.ಮಸೀದಿಯಲ್ಲಿ ಕನಿಷ್ಠ 1-2 ಮೀಟರ್ ಸಾಮಾಜಿಕ ಅಂತರ ಕಡ್ಡಾಯ
8.10-15 ನಿಮಿಷಗಳಲ್ಲಿ ಪ್ರಾರ್ಥನೆಯನ್ನು ಮುಗಿಸಬೇಕು
9.ಪ್ರಾರ್ಥನೆಗೆ ಬರುವವರು ಪ್ರೇಯರ್ ಮ್ಯಾಟ್ ತರಬೇಕು
10.ಸುನ್ನತ್, ನಫೀಲ್ ಪ್ರಾರ್ಥನೆ ಮನೆಯಲ್ಲೇ ಮಾಡಬೇಕು
11.ಮಸೀದಿ ಆವರಣದಲ್ಲಿ ನಿಂತು ಚರ್ಚೆಯಲ್ಲಿ ತೊಡಗಬಾರದು
12.ಮಸೀದಿ, ದರ್ಗಾ ಆವರಣದಲ್ಲಿ ಭಿಕ್ಷಾಟನೆ ನಿಷೇಧ
13.ಗೋರಿಗಳ ಮೇಲೆ ನಮಸ್ಕರಿಸುವುದನ್ನು ನಿಷೇಧ


Spread the love