‘ಕೊರೋನ ಸ್ಟೇ ಹೋಮ್’ ಭಾವನಾತ್ಮಕ ಛಾಯಾಚಿತ್ರ ಸ್ಪರ್ಧೆ-2020″ ರ ಬಹುಮಾನ ವಿತರಣೆ

Spread the love

‘ಕೊರೋನ ಸ್ಟೇ ಹೋಮ್’ ಭಾವನಾತ್ಮಕ ಛಾಯಾಚಿತ್ರ ಸ್ಪರ್ಧೆ-2020″ ರ ಬಹುಮಾನ ವಿತರಣೆ

ಉಡುಪಿ: ಉಪ್ಪಾ ಟ್ರಸ್ಟ್ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಜಂಟಿಯಾಗಿ ಆಯೋಜಿಸಿದ್ದ ಕೊರೋನ ಸ್ಟೇ ಹೋಮ್ “ಭಾವನಾತ್ಮಕ ಛಾಯಾಚಿತ್ರ ಸ್ಪರ್ಧೆ-2020″ಯ ಬಹುಮಾನ ವಿತರಣಾ ಸಮಾರಂಭ ಮಂಗಳವಾರ ಉಡುಪಿ ಗುಂಡಿಬೈಲ್ ವೀವ್ ಡಿಜಿಟಲ್ ಸ್ಟುಡಿಯೋ ದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಎಸ್.ಕೆ.ಪಿ.ಎ ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಎಸ್. ಕೊಡಂಕೂರ್, ಗೌರವಾಧ್ಯಕ್ಷ ಶಿವ ಕೆ. ಅಮೀನ್, ಕಾರ್ಯದರ್ಶಿ ಸುಕೇಶ್ ಕೆ. ಅಮೀನ್, ಕೋಶಾಧಿಕಾರಿ ಪ್ರಸಾದ್ ಜತ್ತನ್ ಉಪ್ಪಾ ಸಂಚಾಲಕ ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.

ಬಹುಮಾನ ಪಡಕೊಂಡವರು ಪ್ರಥಮ: ವಿನಯ್ ಕುಮಾರ್ ಪಾಲನ್, ಗುಜ್ಜರ್ ಬೆಟ್ಟು, ದ್ವಿತೀಯ:ಪ್ರಸನ್ನ ಪೆರ್ಡೂರ್, ತೃತೀಯ ನಿದೇಶ್ ಕುಮಾರ್.


Spread the love