ಕೊಲ್ಲೂರು : ಮನೆಯ ಹಟ್ಟಿಯಿಂದ ದನ ಕಳ್ಳತನ – ದಲ್ಲಾಳಿ ಬಂಧನ, ಇಬ್ಬರು ಆರೋಪಿಗಳು ಪರಾರಿ

Spread the love

ಕೊಲ್ಲೂರು : ಮನೆಯ ಹಟ್ಟಿಯಿಂದ ದನ ಕಳ್ಳತನ – ದಲ್ಲಾಳಿ ಬಂಧನ, ಇಬ್ಬರು ಆರೋಪಿಗಳು ಪರಾರಿ

ಕುಂದಾಪುರ: ಮನೆಯೊಂದರ ಹಟ್ಟಿಗೆ ನುಗ್ಗಿ ದನಗಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವನನ್ನು ಕೊಲ್ಲೂರು ಪೊಲೀಸರು ಬಂಧಿಸಿ ದನ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಉನ್ನಿ ಮೋಯಿನ್ ಎಂದು ಗುರುತಿಸಲಾಗಿದೆ.

ಜುಲೈ 22 ರಂದು ಬೆಳಿಗಿನ ಜಾವ 04:00 ಗಂಟೆಗೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಸುರಕುಂದ ಎಂಬಲ್ಲಿ ಮಾರಣಕಟ್ಟೆ ನಿವಾಸಿ ರಾಜೀವಿ ಶೆಟ್ಟಿ ಎಂಬವರ ಕೊಟ್ಟಿಗೆಯ ಬಳಿ ಸಿಲ್ವರ್ ಬಣ್ಣದ ಇನ್ನೋವಾ ಕಾರನ್ನು ನಿಲ್ಲಿಸಿ ಕಾರಿನ ಹಿಂಬದಿ ಡೋರ್ ನಲ್ಲಿ ಫಿರ್ಯಾಧಿದಾರ ಕೊಟ್ಟಿಗೆಯಲ್ಲಿದ್ದ ದನಗಳನ್ನು ಮೂರು ಜನ ಆರೋಪಿಗಳು ತುಂಬಿಸಿ ಆರೋಪಿಗಳ ಪೈಕಿ ಒಬ್ಬ ಆರೋಪಿ ತಾನು ಬಂದ ಮೋಟಾರು ಸೈಕಲಿನಲ್ಲಿ ಹಾಗು ಇಬ್ಬರು ಆರೋಪಿಗಳು ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದನ್ನು ಗಮನಿಸಿ ಬೊಬ್ಬೆ ಹಾಕಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸಾರ್ವಜನಿಕರು ಬೆಳಿಗ್ಗೆ 5-00 ಗಂಟೆಗೆ ಚಿತ್ತೂರು ಗ್ರಾಮದ ಮೆರ್ಡಿ ಎಂಬಲ್ಲಿ ಇನೋವಾ ವಾಹನ ಮತ್ತು ಮೋಟಾರು ಸೈಕಲ್ನ್ನು ತಡೆ ಹಿಡಿದಿದ್ದರು.

ತಡೆಹಿಡಿದ ವಾಹನವನ್ನು ದನಗಳ್ಳತನವಾದ ಮನೆಯವರು ಹೋಗಿ ನೋಡಿದಾಗ ಇನ್ನೋವಾ ಕಾರಿನಲ್ಲಿ ಕಳವು ಮಾಡಿದ ಕಂದು ಮಿಶ್ರಿತ ಬಣ್ಣದ ದನ ಮತ್ತು ಕಪ್ಪು ಬಣ್ಣದ ದನಗಳ ಕಾಲಿಗೆ ಹಗ್ಗ ಕಟ್ಟಿ ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದ್ದು ಕಾರಿನಲ್ಲಿನ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಈ ವೇಳೆ ಸ್ಥಳೀಯರು ಕೊಲ್ಲೂರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳೀಯರ ಮಾಹಿತಿಯಂತೆ ಕೊಲ್ಲೂರು ಠಾಣಾಧಿಕಾರಿ ಮಹಾದೇವ ಭೋಸ್ಲೆ ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಆರೋಪಿಗಳು ಪರಾರಿಯಾದ ಸ್ಥಳದಲ್ಲಿದ್ದ ದಲ್ಲಾಳಿಯಾದ ಉನ್ನಿ ಮೋಹಿನ್ ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದಾಗ ಉನ್ನಿ ಮೋಹನ್ ಜುಲೈ 21 ರಂದು ರಾಜೀವಿ ಶೆಟ್ಟಿಯವರ ಮನೆಗೆ ಬಂದು ದನ ಮಾರಾಟಕ್ಕೆ ಕೊಡುವ ಬಗ್ಗೆ ವಿಚಾರಿಸಿದ್ದು ರಾಜೀವಿ ಶೆಟ್ಟಿ ದನಗಳನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದರಿಂದ ದನಗಳನ್ನು ಕಳವು ಮಾಡುವ ಉದ್ದೇಶದಿಂದ ಆರೋಪಿ ಉನ್ನಿ ಮೋಹಿನ್ ಇತರ ಇಬ್ಬರು ಅರೋಪಿಗಳೊಂದಿಗೆ ಸೇರಿ ಎರಡು ದನಗಳನ್ನು ಮಾಂಸಕ್ಕಾಗಿ ವಧೆ ಮಾಡಿ ಮಾರಾಟ ಮಾಡಲು ಕೊಟ್ಟಿಗೆಯಿಂದ ಕಳವು ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ತುಂಬಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love