ಕೋವಿಡ್ -19: ಆರೋಗ್ಯವಂತರು ಮಾಸ್ಕ್ ಹಾಕುವ ಅಗತ್ಯವಿಲ್ಲ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಕೋವಿಡ್ -19: ಆರೋಗ್ಯವಂತರು ಮಾಸ್ಕ್ ಹಾಕುವ ಅಗತ್ಯವಿಲ್ಲ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಘೋಷಿಸಿದ್ದು ಸಾರ್ವಜನಿಕರು ಹೊರಗಡೆ ತಿರುಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಒತ್ತಾಯಿಸಲಾಗುತ್ತಿದ್ದು, ಆದರೆ ಆರೋಗ್ಯವಂತರಿಗೆ ಮಾಸ್ಕ್ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಹೇಳಿದರು.

ಅವರು ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಪೊಲೀಸರು ಮಾಸ್ಕ್ ಹಾಕುವಂತೆ ಒತ್ತಡ ಹೇರುತ್ತಿರುವ ಬಗ್ಗೆ ಈಗಾಗಲೇ ನನಗೆ ಹಲವಾರು ದೂರುಗಳು ಬಂದಿದ್ದು ಈ ಬಗ್ಗೆ ಈಗಾಗಲೇ ಜಿಲ್ಲಾ ಎಸ್ಪಿಯವರಿಗೆ ಸೂಚನೆ ನೀಡಿದ್ದು ಅವರು ಪೊಲೀಸ್ ಠಾಣಾ ಹಂತದ ಪೊಲೀಸರಿಗೆ ಕೂಡ ಸೂಚನೆ ನೀಡಿದ್ದಾರೆ.

ಮಾಸ್ಕ್ ಧರಿಸುವುದು ಪ್ರತಿಯೊಬ್ಬರಿಗೂ ಅಗತ್ಯವಿಲ್ಲ, ಯಾರಾದರೂ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದಲ್ಲಿ ಮಾತ್ರ ಮಾಸ್ಕ್ ಧರಸಿ ಓಡಾಡುವಂತೆ ತಿಳಿಸಿದ ಅವರು, ಆರೋಗ್ಯದಿಂದಿರುವ ವ್ಯಕ್ತಿಗಳು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರುಅನಾರೋಗ್ಯ ಪೀಡಿತರು ಮತ್ತು ರೋಗ ಲಕ್ಷಣ ಇರುವವರು ಮಾತ್ರ ಮಾಸ್ಕ್ ಧರಿಸಬೇಕಾಗಿದೆ. ಆದಾಗ್ಯೂ ಜಿಲ್ಲೆಯಲ್ಲಿ ಮಾಸ್ಕ್ ಸಂಗ್ರಹ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯಲ್ಲಿ ಮಾಸ್ಕ್ ಕೊರತೆಯಾಗದಂತೆ ದಾನಿಗಳಿಂದ ಮಾಸ್ಕ್ ಒದಗಿಸುವಂತೆ ವಿನಂತಿಸಲಾಗಿದ್ದು ಉದ್ಯಮಿ ಜಿ ಶಂಕರ್ ಅವರು 2 ಲಕ್ಷ ಸಾಮಾನ್ಯ ಮಾಸ್ಕ್ ಹಾಗೂ 2000 ಎನ್ 95 ಮಾಸ್ಕ್ ನೀಡಲು ಒಪ್ಪಿಕೊಂಡಿದ್ದಾರೆ ಎಂದರು. ಅಲ್ಲದೆ ಇನ್ಫೋಸಿಸ್ ವತಿಯಿಂದ ಮಂಗಳೂರಿಗೆ ಈಗಾಗಲೇ ನೀಡಿದ್ದು ಉಡುಪಿ ಜಿಲ್ಲೆಗೂ ನೀಡುವಂತೆ ಕೋರಿಕೊಳ್ಳಲಾಗಿದ್ದು ನಾಳೆಯ ಒಳಗೆ ಸ್ಪಷ್ಟ ವಿವರ ಲಭಿಸಲಿದೆ ಎಂದರು. ಅಲ್ಲದೆ ಜಿಲ್ಲೆಗೆ ಅಗತ್ಯವಿರುವ ಸ್ಯಾನಿಟೈಸರನ್ನು ಜಿಲ್ಲೆಯ ಒಂದು ಮದ್ಯದ ಡಿಸ್ಟಿಲರಿಯವರಲ್ಲಿ ತಯಾರಿಸಿಕೊಡಲು ಸೂಚನೆ ನೀಡಿದ್ದು ಅದರಂತೆ ಅಗತ್ಯವಿರುವಷ್ಟು ಸ್ಯಾನಿಟೈಸರನ್ನು ಕೂಡ ದಾಸ್ತಾನು ಇಡಲಾಗುವುದು ಎಂದರು.

ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಸುಮಾರು 435 ಮಂದಿ ಕೂಲಿ ಕಾರ್ಮಿಕರನ್ನು ನಿರಾಶ್ರಿತ ಶಿಬಿರಗಳಲ್ಲಿ ಇಡಲಾಗಿದ್ದು ಅವರಿಗೆ ಬೇಕಾದ ಆಹಾರದ ವ್ಯವಸ್ಥೆಯನ್ನು ಈಗಾಗಲೇ ಮಾಡಿದ್ದು ಉಳಿದವರನ್ನು ಅವರವರು ವಾಸಿಸುತ್ತಿದ್ದ ಶಿಬಿರಗಳಿಗೆ ಕಳುಹಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ದಾನಿಗಳಿಂದ ಆಹಾರದ ಕಿಟ್ ಜಿಲ್ಲಾಡಳಿತದಿಂದ ಒದಗಿಸಲಾಗುವುದು. ಉದ್ಯಮಿಗಳು ನಿರಾಶ್ರಿತ ಕಾರ್ಮಿಕರಿಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಬಂಜಾರ ಪ್ರಕಾಶ್ ಶೆಟ್ಟಿ 5000, ಉದ್ಯಮಿ ಜಿ ಶಂಕರ್ 2000 ಹಾಗೂ ಅಂಬಲಪಾಡಿ ದೇವಳದ ವತಿಯಿಂದ 2000 ಆಹಾರದ ಕಿಟ್ ಗಳನ್ನು ಒದಗಿಸಿದ್ದಾರೆ. ಅಲ್ಲದೆ ಕುಂದಾಪುರದಲ್ಲಿ ಇರುವ ಕಾರ್ಮಿಕರಿಗಾಗಿ ಉದ್ಯಮಿ ಉದಯ್ ಹೆಗ್ಡೆ ಎಂಬವರು ರೂ 5 ಲಕ್ಷ ಮೌಲ್ಯದ ಕಿಟ್ ಗಳನ್ನು ನೀಡಲು ಮುಂದೆ ಬಂದಿದ್ದಾರೆ ಆದ್ದರಿಂದ ಕಾರ್ಮಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


Spread the love