ಕೋವಿಡ್ -2019; ಮಾ. 19ರಂದು ಬಿಕರ್ನಕಟ್ಟೆ ಚರ್ಚಿನಲ್ಲಿ ನೊವೆನಾ, ಬಲಿಪೂಜೆ ರದ್ದು

Spread the love

ಕೋವಿಡ್ -2019; ಮಾ. 19ರಂದು ಬಿಕರ್ನಕಟ್ಟೆ ಚರ್ಚಿನಲ್ಲಿ ನೊವೆನಾ, ಬಲಿಪೂಜೆ ರದ್ದು

ಮಂಗಳೂರು : ಕೊರೋನಾ ವೈರಸ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಮುನ್ನೆಚ್ಚರಿಕಾ ಕ್ರಮವಾಗಿ 144(3) ನಿಷೇಧಾಜ್ಷೆ ಜಾರಿಗೆಗೊಳಿಸಿರುವ ಹಿನ್ನಲೆಯಲ್ಲಿ ಪ್ರಸಿದ್ದ ಬಿಕರ್ನಕಟ್ಟೆ ಬಾಲ ಯೇಸುವಿನ ಚರ್ಚಿನಲ್ಲಿ ಪ್ರತಿ ವಾರದದಂತೆ ಗುರುವಾರ ನಡೆಯುವ ನೊವೆನಾ ಪ್ರಾರ್ಥನಾ ವಿಧಿಗಳನ್ನು ರದ್ದುಗೊಳಿಸಲಾಗಿದೆ ಎಂದು ಬಾಸಿಲಿಕಾದ ಧರ್ಮಗುರುಗಳು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆಗೊಳಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನಸೇರುವುದನ್ನು ತಡೆಗಟ್ಟಲು ವ ಜಿಲ್ಲಾಧಿಕಾರಿಯವರು ಈ ಆದೇಶ ನೀಡಿದ್ದಾರೆ. ಆದ್ದರಿಂದ ಮಾರ್ಚ್ 19, 2020 ಗುರುವಾರದಂದು ನಡೆಯುವ ಬಲಿಪೂಜೆ ಹಾಗೂ ನೊವೆನಾ ಪ್ರಾರ್ಥನಾ ವಿಧಿಗಳು ರದ್ದುಗೊಳಿಸಲಾಗಿದ್ದು ಭಕ್ತಾದಿಗಳು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love