ಗಂಗೊಳ್ಳಿ| ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 86.79 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಗಂಗೊಳ್ಳಿ: ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಅನೇಕಲ್ ಪಬ್ಲಿಕ್ ಸ್ಕೂಲ್ ನಡೆಸುತ್ತಿರುವ ಪ್ರಕೃತಿ ಹಾಗೂ ಎಲ್ಟನ್ ರೆಬೆರೋ ಎಂಬವರು 2024ರ ಎಪ್ರಿಲ್ನಲ್ಲಿ ಗಂಗೊಳ್ಳಿಗೆ ಬಂದು ಗುಜ್ಜಾಡಿಯ ಟೀನಾ ನಜರತ್ ಎಂಬವರನ್ನು ಭೇಟಿಯಾಗಿದ್ದು, ಈ ವೇಳೆ ಆಸ್ಟ್ರೇಲಿಯಾದಲ್ಲಿ ಉದ್ಯೋಗಕ್ಕೆ ವೀಸಾ ಕೊಡಿಸುವುದಾಗಿ ನಂಬಿಸಿ ಟೀನಾ ಅವರಿಂದ 34,00,000ರೂ. ಹಾಗೂ ಅವರ ಸ್ನೇಹಿತರಾದ ಜೋನ್ಸನ್ ಫೆರ್ನಾಂಡಿಸ್ 8,00,000ರೂ., ಲೀಟಾ ಪಿಂಟೋ 6,80,000ರೂ., ಸೋಪಿಯಾ ಪಿಂಟೋ 19,50,000ರೂ., ರೀನಾ ಪ್ರವೀಣ ನೊರೊನ್ನಾ ಅವರಿಂದ 18,00,000ರೂ. ಸಹಿತ ಒಟ್ಟು 86,70,000ರೂ. ಹಣವನ್ನು ಹಂತ ಹಂತವಾಗಿ ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.
ಬಳಿಕ ಆಸ್ಟ್ರೇಲಿಯಾದಲ್ಲಿ ಉದ್ಯೋಗದ ವಿಸಾವನ್ನು ಮಾಡಿಕೊಡದೇ ಹಾಗೂ ಹಣವನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
            












