ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರಡು ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಮೂವರು ಆರೋಪಿಗಳ ಸೆರೆ
ಮಂಗಳೂರು: ಕೇರಳ -ಕರ್ನಾಟಕ ಗಡಿಭಾಗ ತಲಪಾಡಿ ಸಮೀಪದ ತಚ್ಚಣಿ ಎಂಬಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಎರಡು ಲಕ್ಷ ರೂಪಾಯಿ ಮೌಲ್ಯದ 42 ಗ್ರಾಂ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ.
ಉಳ್ಳಾಲ, ಕೇರಳ -ಕರ್ನಾಟಕ ಗಡಿಭಾಗ ತಲಪಾಡಿ ಸಮೀಪದ ತಚ್ಚಣಿ ಎಂಬಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಎರಡು ಲಕ್ಷ ರೂಪಾಯಿ ಮೌಲ್ಯದ 42 ಗ್ರಾಂ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ ಉಳ್ಳಾಲ ತಾಲೂಕಿನ ತಲಪಾಡಿ ಕೊಲಂಗೆರೆ ನಿವಾಸಿ ಅಬ್ದುಲ್ ರವೂಫ್ (30), ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆ ನಿವಾಸಿ ಶರೀಫ್ ಅಲಿಯಾಸ್ ಅಮಿನ್ (34), ಎಂಡಿಎಂಎ ಖರೀದಿಸಲು ಬಂದಿದ್ದ ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಸಂಕೇಶ್ ಹೌಸ್ ನಿವಾಸಿ ನಿಯಾಝ್ (24) ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೋರ್ವ ಆರೋಪಿ ಪಣಂಬೂರಿನ ಬೆಂಗ್ರೆ ನಿವಾಸಿ ಸಲಾಂ ಎಂಬಾತ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆ 1985ರ ಅಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಟೊಯೋಟಾ ಗ್ಲಾಂಜಾ ಕಾರು, ಮೂರು ಮೊಬೈಲ್ ಫೋನ್, 2500 ರೂಪಾಯಿ ನಗದು, ತೂಕಮಾಪನ, ಝಿಪ್‌ಲಾಕ್ ಕವರ್‌ಗಳನ್ನು ಉಳ್ಳಾಲ ಪೊಲೀಸರು ವಶಪಡಿಸಿದ್ದಾರೆ.













