ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತರಾದ ಡಾ ಹರ್ಷ ಅವರ ಆದೇಶದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಮಾಡಿ 2 ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ.

ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿ ರೈಲ್ವೇ ಸ್ಟೇಷನ್ ಬಳಿಯಲ್ಲಿ ಬಂದರು ನಿವಾಸಿ ಫಾರೂಕ್ ಎಂಬಾತನನ್ನು ತನ್ನ ಬಿಳಿ ಬಣ್ಣದ ಬ್ರೀಝಾ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಸುಮಾರು 30000 ಮೌಲ್ಯದ 2 ಕೆಜಿ ಗಾಂಜಾ, ಸುಮಾರು ರೂ 6 ಲಕ್ಷ ಮೌಲ್ಯದ ಬಿಳಿ ಬಣ್ಣದ ಬ್ರೀಝಾ ಕಾರು ನಗದು ರೂ 20030 ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ಸುಮಾರು ರೂ 654030 ಆಗಿರುತ್ತದೆ.

ಎರಡನೇ ಪ್ರಕರಣದಲ್ಲಿ ಮಂಗಳೂರು ನಗರದ ಗ್ರಾಮಾಂತರ ಠಾಣಾ ವ್ಯಾಪ್ತಿಯಅರ್ಕಳ ಯಶಸ್ವಿ ಹಾಲ್ ಬಳಿ ಯಮಹಾ ಬೈಕಿನಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಅಬಿದ್ ಮತ್ತು ಜುಭೈರ್ ಎಂಬವರನ್ನು ದಸ್ತಗಿರಿ ಮಾಡಿ ಅವರಿಂದ ರೂ 45000 ಮೌಲ್ಯದ 3 ಕೆಜಿ ಗಾಂಜಾ ಸುಮಾರು ರೂ50000 ಮೌಲ್ಯದ ಯಮಹಾ ಬೈಕ್ ಮತ್ತು ಸುಮಾರು ರೂ 50000 ಮೌಲ್ಯದ 3 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.


Spread the love