ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಮಂಗಳೂರು: ಇಕೋನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೋಲಿಸ್ ಠಾಣಾ ಪಿಐ ಮತ್ತು ಸಿಬಂದಿಗಳು ಮಾದಕ ದ್ರವ್ಯ ಸಾಗಾಟ/ಮಾರಾಟ ಮಾಡುತ್ತಿರುವ ವ್ಯಕ್ತಿಯನ್ನು ಬಂಧೀಸಿದ್ದಾರೆ.

ಬಂಧಿತನನ್ನು ಕಾಸರಗೋಡು ಉಪ್ಪಳಗೇಟ್ ನಿವಾಸಿ ಅರುಣ್ ಕುಮಾರ್ (21) ಎಂದು ಗುರುತಿಸಲಾಗಿದೆ.

ಬಂಧಿತನು ಮಂಗಳೂರು ನಗರದ ಅಡಂಕುದ್ರು ನೇತ್ರಾವತಿ ಬ್ರಿಡ್ಜಿನ ಕಣಚ್ಚೂರು ಸೀಸನಿಂಗ್ ಇಂಡಸ್ಟ್ರೀಸ್ ಎದುರು ಬೈಕಿನಲ್ಲಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಲಾಗಿದ್ದು, ಬಂಧಿತನಿಂದ, ರೂ 20000 ಮೌಲ್ಯದ 1 ಕೆಜಿ 100 ಗ್ರಾಂ ತೂಕದ ಗಾಂಜಾ, ರೂ 65000 ಮೌಲ್ಯದ ಮೋಟಾರ್ ಸೈಕ್ ಹಾಗೂ ರೂ 1000 ಮೌಲ್ಯದ ಮೊಬೈಲ್ ವಶಪಡಿಸಕೊಂಡಿದ್ದು ವಶಪಡಿಸಿಕೊಂಡಿದ್ದ ಸೊತ್ತುಗಳ ಮೌಲ್ಯ ರೂ 86000 ಆಗಿದೆ.


Spread the love