ಗಾಂಜಾ ವ್ಯಸನಿಯ ಬಂಧನ

Spread the love

ಗಾಂಜಾ ವ್ಯಸನಿಯ ಬಂಧನ

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ ಯೂಸೂಫ್ ಸ್ಟೋರ್ ಬಳಿ ಗಾಂಜಾ ಅಮಲು ಪದಾರ್ಥವನ್ನು ಸೇವಿಸುತ್ತಿದ್ದ ಆರೋಪಿಯೋರ್ವನನ್ನು ಪೊಲೀಸ್ ಉಪನಿರೀಕ್ಷಕರಾದ ಉಮೇಶ್ ಕುಮಾರ್ ಎಮ್.ಎನ್ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿ ಪಣಂಬೂರು ಠಾಣೆಯಲ್ಲಿ  ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಬಂಧಿತನನ್ನು ಬೆಂಗ್ರೆಸ ಕಸಬಾ ಗ್ರಾಮದ ನಿವಾಸಿ ಮೊಯಿದ್ದಿನ್ ಶಫೀಜ್ (19) ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವನ್ನು ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಗೌಡ. ಆರ್ .ಐ.ಪಿ.ಎಸ್ ಇವರ ಮಾರ್ಗದರ್ಶನದಂತೆ ಪಣಂಬೂರು ಠಾಣಾ ಪಿಐ ರಫೀಕ್ ಕೆ.ಎಮ್ ನೇತೃತ್ವ್ವದಲ್ಲಿ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ಹಾಗೂ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love