ಗುರೂಜಿ ಸಾಯಿ ಈಶ್ವರ್ ಒಬ್ಬ ಆಧ್ಯಾತ್ಮಿಕ ಸಂತ-ಡಾ| ಜಯಂತ ಅಠವಳೆ

Spread the love

 ಗುರೂಜಿ ಸಾಯಿ ಈಶ್ವರ್ ಒಬ್ಬ ಆಧ್ಯಾತ್ಮಿಕ ಸಂತ-ಡಾ| ಜಯಂತ ಅಠವಳೆ

ಗೋವಾದ ಪೋಂಡಾದಲ್ಲಿರುವ ರಾಮನಾಥಿಗೆ ಉಡುಪಿ (ಕರ್ನಾಟಕ) ದ ಗುರುಜಿ ಸಾಯಿ ಈಶ್ವರ್ ಸೆಪ್ಟೆಂಬರ್ 16 ರಂದು ಸನಾತನ ಆಶ್ರಮಕ್ಕೆ ಆಗಮಿಸಿ ಒಟ್ಟು ಮೂರು ದಿನ ಅಲ್ಲಿನ ಆಶ್ರಮ ವಾಸಿಗಳಿಗೆ ತಮ್ಮ ಆಧ್ಯಾತ್ಮಿಕ ಜ್ಞಾನವನ್ನು ಹಂಚಿಕೊಂಡರು.

ಸನಾತನ ಸಂಸ್ಥೆಯ ಹಿರಿಯ ಗುರು ಪೂಜನೀಯ ಡಾ| ಜಯಂತ ಅಠವಳೆಯವರು ಗುರೂಜಿ ಸಾಯಿ ಈಶ್ವರ್ ಇವರ ಆಧ್ಯಾತ್ಮಿಕ ಜ್ಞಾನ, ಪೆಂಡುಲಂ ಶಾಸ್ತ್ರ ಹಾಗು ಯು.ಟಿ.ಎಸ್ ಸ್ಕ್ಯಾನರ್ ಬಗ್ಗೆ ಇರುವ ಜ್ಞಾನದ ಬಗ್ಗೆ ಸುಮಾರು ಮೂರುವರೆ ಗಂಟೆ ಚರ್ಚೆ ಮಾಡಿದರು “ನಮಗೆ ಒಬ್ಬ ಸಂತ ಸಿಕ್ಕಿದರು” ಎಂದು ಸಂತಸ ವ್ಯಕ್ತಪಡಿಸಿರುತ್ತಾರೆ.

ಮತ್ತೆ ಡಾ| ಜಯಂತ ಅಠವಳೆಯವರು ಗುರೂಜಿ ಸಾಯಿ ಈಶ್ವರ್ ರನ್ನ ವೈಯಕ್ತಿಕ ಮಾತುಕತೆ ಮಾಡಿ ಸನಾತನ ಸಂಸ್ಥೆಯ ಸಾಧಕರ ಹಾಗು ಸಂಸ್ಥೆಯ ಆಧ್ಯಾತ್ಮಿಕ ಸಂಶೋಧನೆ ಮಾಡುತ್ತಿರುವ ಸಂಶೋಧಕರಿಗೆ ತಮ್ಮ ಜ್ಞಾನದ ಸದುಪಯೋಗ ಪಡಿಸಿಕೊಳ್ಳಲು ಸಹಕಾರ ನೀಡುವಂತೆ ಸಲಹೆ ನೀಡಿದರು.

ಈ ಸಮಯದಲ್ಲಿ, ಗುರೂಜಿ ಸಾಯಿ ಈಶ್ವರ್ ಆಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರ ಮತ್ತು ಧರ್ಮದ ಚಟುವಟಿಕೆಗಳ ಬಗ್ಗೆ ಮತ್ತು ಆಧ್ಯಾತ್ಮಿಕ ಸಂಶೋಧನೆಗಳ ಬಗ್ಗೆ ವಿದ್ಯಾ ಶಾನುಬೋಗರವರು ವಿಶೇಷ ಮಾಹಿತಿಗಳನ್ನು ಗುರೂಜಿ ಸಾಯಿ ಈಶ್ವರ್‌ ರವರಿಗೆ ನೀಡಿದರು.

ಸನಾತನ ಸಂತ ಪೂಜನೀಯ (ಡಾ) ಮುಕುಲ್ ಗಾಡ್ಗಿಲ್ ಅವರು ಗುರು ಸಾಯಿ ಈಶ್ವರ್ ಅವರಿಗೆ ಹಾರ, ಶಾಲು ಹಾಕಿ ಗೌರವಿಸಿದರು.

ಗುರೂಜಿ ಸಾಯಿ ಈಶ್ವರ್ ದೈಹಿಕ ಮಾನಸಿಕ ಆರೋಗ್ಯ ‘ಗುಣಪಡಿಸುವ’ ವಿಧಾನವಾದ ಸಾಯಿ ಸ್ಪರ್ಶ ಮೂಲಕ ಅನ್ವೇಷಕರ (ಆಶ್ರಮದಲ್ಲಿ ಆಧ್ಯಾತ್ಮಿಕ ಸಾದಕರ) ದೈಹಿಕ ಖಾಯಿಲೆಗಳಿಗೆ ಚಿಕಿತ್ಸೆ ನೀಡಿದರು.

ಪೆಂಡುಲಂ ಶಾಸ್ತ್ರ ಹಾಗು ಯು.ಟಿ.ಎಸ್ ಸ್ಕ್ಯಾನಿಂಗ್ ಬಗ್ಗೆ ಮಾಹಿತಿಯನ್ನು ಸನಾತನ ಸಂಸ್ಥೆಯ ಆಧ್ಯಾತ್ಮಿಕ ಸಂಶೋದಕರಿಗೆ ನೀಡಿದರು.

ಗುರೂಜಿ ಸಾಯಿ ಈಶ್ವರ್ “ಸನಾತನ ಸಂಸ್ಥೆಯು ದೇಶದ ಯಾವುದೇ ಭಾಗದ ತಮ್ಮ ಸಾಧಕರ ಆಶ್ರಮಗಳಿಗೆ ಆಹ್ವಾನಿಸಿದರೂ ತಾನು ಸಂತೋಷದಿಂದ ಅಲ್ಲಿಗೆ ಬೇಟಿನೀಡಿ ತಮ್ಮ ಆಧ್ಯಾತ್ಮಿಕ ಜ್ಞಾನವನ್ನು ಅವರಿಗೆ ಹಂಚುವೆ” ಎಂದು ತಮ್ಮ ಇಚ್ಚೆಯನ್ನು ತಿಳಿಸಿರುತ್ತಾರೆ.

ರಾಮನಾಥಿಯ ಸನಾತನ ಆಶ್ರಮಕ್ಕೆ ಗುರೂಜಿ ಸಾಯಿ ಈಶ್ವರ್ ಇವರ ಬೇಟಿಯ ಸಂದರ್ಭದಲ್ಲಿ ಶಂಕರಪುರ ಸಾಯಿ ಸಾಂತ್ವನ ಮಂದಿರದ ಟ್ರಸ್ಟಿ ವಿಶ್ವನಾಥ ಸುವರ್ಣ, ಸಂಪತ್ ಶೆಟ್ಟಿ ಉಡುಪಿ, ಸತೀಶ್ ದೇವಾಡಿಗ , ಪ್ರಸಾದ್ ಅಮೀನ್, ಗಣೇಶ್ ಪಾಲನ್, ಅಮಿತ್ ಬಜಪೆ ಜೊತೆಯಾಗಿದ್ದರು.


Spread the love