ಚರ್ಚುಗಳಲ್ಲಿ ಶವ ಹೂಳುವ ಕುರಿತ ಜನಾರ್ದನ ಪೂಜಾರಿ ಹೇಳಿಕೆಗೆ ಕಥೊಲಿಕ್ ಸಭಾ ಖಂಡನೆ

Spread the love

ಚರ್ಚುಗಳಲ್ಲಿ ಶವ ಹೂಳುವ ಕುರಿತ ಜನಾರ್ದನ ಪೂಜಾರಿ ಹೇಳಿಕೆ ಕಥೊಲಿಕ್ ಸಭಾ ಖಂಡನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಯಾವುದೇ ಪರ-ವಿರೋಧ ಪ್ರತಿಕ್ರಿಯೆಯನ್ನು ನೀಡದ ಕ್ರೈಸ್ತ ಧರ್ಮದವರನ್ನು ನಿಮ್ಮ ಚರ್ಚುಗಳಲ್ಲಿ ಶವಗಳನ್ನು ಹೂತಿಡಲಿಲ್ಲವಾ? ಯಾಕೆ ಹೂತಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿರುವ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಹೇಳಿಕೆಯನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶ ತೀವ್ರವಾಗಿ ಖಂಡಿಸಿದೆ

ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ನ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜಾ, ಮಾತನಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ರೈಸ್ತ ಧರ್ಮದವರು ಶಾಂತಿಪ್ರಿಯರಾಗಿದ್ದು ನಮ್ಮ ಧರ್ಮವನ್ನು ಪ್ರೀತಿಸುತ್ತಿದ್ದು, ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕ್ರೈಸ್ತ ದೇವಾಲಯಗಳಲ್ಲಿ ಹಾಗೂ ನಮ್ಮ ಮನೆಗಳಲ್ಲಿ ಮಾತ್ರ ಆಚರಿಸುತ್ತಾ ಬಂದಿರುತ್ತೇವೆ. ಅನಾದಿ ಕಾಲದಿಂದಲೂ ನಾವು ಇತರ ಧರ್ಮವನ್ನು ಗೌರವಿಸುತ್ತಾ ಬಂದಿರುತ್ತೇವೆ. ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ನಮ್ಮ ಧರ್ಮದವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ನಾವು ಕೇವಲ ಕ್ರೈಸ್ತ ಸಂಘಟನೆಗಳಲ್ಲದೆ ಲಯನ್ಸ್, ರೋಟರಿ, ಜೆ.ಸಿ, ಮುಂತಾದ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲೂ ವಿವಿಧ ಹುದ್ದೆಗಳನ್ನು ಅಲಂಕರಿಸಿ ರಕ್ತದಾನ ಶಿಬಿರ ಹಾಗೂ ಇತರ ಜನೋಪಯೋಗಿ ಸೇವೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿರುತ್ತೇವೆ,

ನಾವು ಕ್ರೈಸ್ತ ಧರ್ಮದ ವಿಷಯ ಬಿಟ್ಟು ಬೇರೆ ಯಾವುದೇ ಧರ್ಮದವರ ಬಗ್ಗೆ ಇದುವರೆಗೆ ಮಾತನಾಡಿಲ್ಲ ಹಾಗೂ ಮಾತನಾಡುವುದೂ ಇಲ್ಲ. ನಮ್ಮ ಮರಣಗಳಿಗೆ, ಮದುವೆ, ನಾಮಕರಣ, ನಮ್ಮ ಮಕ್ಕಳಿಗೆ ದೇವರ ಪ್ರಸಾದ ಸಿಗುವ ಸಮಯದಲ್ಲಿ ನಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದಾಗ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವು ಪ್ರೀತಿಯಿಂದ ಕರೆದಾಗ ತನ್ನ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ಪ್ರೀತಿಯನ್ನು ಇಟ್ಟು ಹಾಗೂ ಪ್ರತಿಭಟನೆಗಳಲ್ಲಿ ತಪ್ಪದೆ ಭಾಗವಹಿಸಿದಂತಹ ಅತೀ ಪ್ರೀತಿಯಿಂದ ಕಾಣುತ್ತಿರುವ ಕ್ರೈಸ್ತ ಸಮುದಾಯದವರ ಬಗ್ಗೆ ಮಾಜಿ ಕೇಂದ್ರೀಯ ಮಂತ್ರಿಗಳು ಹಾಗೂ ಲೋಕ ಸಭಾ ಸದಸ್ಯರಾದ ಜನಾರ್ಥನ ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಯಾವುದೇ ಪರ-ವಿರೋಧ ಪ್ರತಿಕ್ರಿಯೆಯನ್ನು ನೀಡದ ಕ್ರೈಸ್ತ ಧರ್ಮದವರನ್ನು ನಿಮ್ಮ ಚರ್ಚುಗಳಲ್ಲಿ ಶವಗಳನ್ನು ಹೂತಿಡಲಿಲ್ಲವಾ? ಯಾಕೆ ಹೂತಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಜನಾರ್ಧನ ಪೂಜಾರಿಯವರನ್ನು ಅತೀ ಪ್ರೀತಿಯಿಂದ ಕಾಣುತ್ತಿರುವ ಕ್ರೈಸ್ತ ಧರ್ಮದವರು ನಮ್ಮ ಮರಣಗಳಿಗೆ, ಮದುವೆ, ನಾಮಕರಣ, ನಮ್ಮ ಮಕ್ಕಳಿಗೆ ದೇವರ ಪ್ರಸಾದ ಸಿಗುವ ಸಮಯದಲ್ಲಿ ನಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದಾಗ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವು ಪ್ರೀತಿಯಿಂದ ಕರೆದಾಗ ತನ್ನ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ಪ್ರೀತಿಯನ್ನು ಇಟ್ಟು ಹಾಗೂ ಪ್ರತಿಭಟನೆಗಳಲ್ಲಿ ತಪ್ಪದೆ ಭಾಗವಹಿಸಿದಂತಹ ಮಾಜಿ ಕೇಂದ್ರೀಯ ಮಂತ್ರಿಗಳು ಹಾಗೂ ಲೋಕ ಸಭಾ ಸದಸ್ಯರಾದ ಜನಾರ್ಥನ ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಯಾವುದೇ ಪರ-ವಿರೋಧ ಪ್ರತಿಕ್ರಿಯೆಯನ್ನು ನೀಡದ ಕ್ರೈಸ್ತ ಧರ್ಮದವರನ್ನು ನಿಮ್ಮ ಚರ್ಚುಗಳಲ್ಲಿ ಶವಗಳನ್ನು ಹೂತಿಡಲಿಲ್ಲವಾ? ಯಾಕೆ ಹೂತಿಟ್ಟಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ನಾವು ಅತೀ ಗೌರವದಿಂದ ಕಾಣುತ್ತಿರುವ ಮಹನೀಯರು ಕೇಳಿದ ಈ ಪ್ರಶ್ನೆಯ ಬಗ್ಗೆ ಕ್ರೈಸ್ತ ಸಮುದಾಯದವರಿಗೆ ಅತೀವ ನೋವುಂಟಾಗಿದ್ದು ಜನಾರ್ಧನ ಪೂಚಾರಿಯವರ ಈ ಹೇಳೀಕೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಖಂಡಿಸುತ್ತೇವೆ ಎಂದು ಹೇಳಿದರು


Spread the love
Subscribe
Notify of

0 Comments
Inline Feedbacks
View all comments