ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ

Spread the love

ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ

ಮಂಗಳೂರು : ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕ ಹಿತದೃಷ್ಠಿಯಿಂದ ದಕ ಜಿಲ್ಲೆಯ ಎಲ್ಲಾ ಬೆಳೆ ರಕ್ಷಣೆಗಾಗಿ ಮತ್ತು ಆತ್ಮರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಆಯುಧ ಪರವಾನಿಗೆಗಳನ್ನು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ 159ರ ಕಲಂ 17 (3) (ಬಿ) ಅನ್ವಯ ತಾತ್ಕಾಲಿಕ ಅವಧಿಗೆ ಅಮಾನತಿನಲ್ಲಿರಿಸುವುದು ಸೂಕ್ತವೆಂದು ಹಾಗೂ ಸದರಿ ಅವಧಿಯಲ್ಲಿ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಅವಶ್ಯವೆಂದು ಮನಗಂಡು ದಕ ಜಿಲ್ಲಾಧಿಕಾರಿ ಸದ್ರಿ ಪರವಾನಿಗೆಯನ್ನು ಈ ಆದೇಶದ ದಿನಾಂಕದಿಂದ ಮೇ 22ರ ವರೆಗೆ ಅಮಾನತಿನಲ್ಲಿರಿಸಿ ಆದೇಶಿಸಿರುತ್ತಾರೆ

ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಏಪ್ರಿಲ್ 20 ರ ಒಳಗೆ ನಮೂನೆ ನಂ 8ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದು ಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ತಮ್ಮ ಬೆಳೆ ರಕ್ಷಣೆಗಾಗಿ ಆಯುಧದ ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸದ ಒಂದು ವಾರದೊಳಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸುವುದು.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದವರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ರಿವಾಲ್ವರ್/ಪಿಸ್ತೂಲ್‍ಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು (ಎಸ್.ಬಿ.ಬಿ.ಎಲ್./ಡಿ.ಬಿ.ಬಿ.ಎಲ್/ಎಸ್.ಬಿ..ಎಮ್.ಎಲ್/ಡಿ.ಬಿ.ಎಮ್.ಎಲ್/ರೈಫಲ್) ಹತ್ತಿರದ ನಮೂನೆ ನಂ. 8ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಏಪ್ರಿಲ್ 20ರೊಳಗೆ ಠೇವಣಿ ಇಡುವುದು ಈ ಬಗ್ಗೆ ಯಾವುದೇ ಆಕ್ಷೇಪ ಇದ್ದಲ್ಲಿ ಸ್ವರಕ್ಷಣೆಗೆ ಆಯುಧದ ತೀರಾ ಅವಶ್ಯಕತೆ ಇದೇ ಎಂದಾದಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವಾರದೊಳಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಮಂಗಳೂರು ನಗರ ವ್ಯಾಪ್ತಿಯನ್ನು ಬಿಟ್ಟು ಉಳಿದ ಕಡೆ ಪೊಲೀಸ್ ಅಧೀಕ್ಷಕರು, ದಕ ಜಿಲ್ಲೆ ಇವರಿಗೆ ಅಹವಾಲುಗಳನ್ನು ಸಲ್ಲಿಸಬೇಕು.

ಅಮಾನತಿನ ಅವಧಿ ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಅಧಿಕಾರಿಗಳು/ಡೀಲರ್ ರು ಅಂತಹ ಆಯುಧಗಳನ್ನು ಠೇವಣಿದಾರರಿಗೆ ಹಿಂತಿರುಗಿಸುವಂತೆಯೂ, ಪರವಾನಿಗೆದಾರರು ಆಯುಧವನ್ನು ಮರು ಪಡೆದುಕೊಳ್ಳಬಹುದಾಗಿದೆ.


Spread the love