ಜಗದೀಶ್ ಪೂಜಾರಿಗೆ ಬೆಳಕು ಕರ್ನಾಟಕ ಶ್ರೇಷ್ಠತಾ ಸೇವಾ ಪ್ರಶಸ್ತಿ–2026″ ಪ್ರದಾನ 

Spread the love

ಜಗದೀಶ್ ಪೂಜಾರಿಗೆ ಬೆಳಕು ಕರ್ನಾಟಕ ಶ್ರೇಷ್ಠತಾ ಸೇವಾ ಪ್ರಶಸ್ತಿ–2026″ ಪ್ರದಾನ 

ರಾಜ್ಯ ಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಸೇವಾ ಪ್ರಶಸ್ತಿ–2026 ಜಗದೀಶ್ ಪೂಜಾರಿಗೆ ಪ್ರದಾನ ಮಂಗಳೂರಿನ ಖ್ಯಾತ ದೇಹದಾರ್ಢ್ಯ ಪಟು ಹಾಗೂ ಕ್ರೀಡಾ ಸಾಧಕರಾದ ಜಗದೀಶ್ ಪೂಜಾರಿ ಅವರಿಗೆ ಬೆಳಕು ಸೇವಾ ಫೌಂಡೇಶನ್ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ “ಬೆಳಕು ಕರ್ನಾಟಕ ಶ್ರೇಷ್ಠತಾ ಸೇವಾ ಪ್ರಶಸ್ತಿ–2026” ಪ್ರದಾನ ಮಾಡಿ ಗೌರವಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಜಗದೀಶ್ ಪೂಜಾರಿ ಅವರು ಸಲ್ಲಿಸಿರುವ ಅತ್ಯುತ್ತಮ ಸಾಧನೆ, ಪರಿಶ್ರಮ ಮತ್ತು ಸಮಾಜಕ್ಕೆ ನೀಡಿರುವ ಪ್ರೇರಣಾದಾಯಕ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಮೈಸೂರು ಜಿಲ್ಲೆಯ ತಿ. ನರಸೀಪುರ ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆಯ ಒಳಾಂಗಣ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಜಗದೀಶ್ ಪೂಜಾರಿ ಅವರ ಸಾಧನೆಯನ್ನು ಶ್ಲಾಘಿಸಿ, ಪ್ರಶಸ್ತಿ ಲಭಿಸಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ಗೌರವವು ಜಗದೀಶ್ ಪೂಜಾರಿ ಅವರ ನಿರಂತರ ಪರಿಶ್ರಮ, ಕ್ರೀಡಾ ಸಾಧನೆ ಮತ್ತು ಸಮಾಜಕ್ಕೆ ನೀಡುತ್ತಿರುವ ಪ್ರೇರಣಾದಾಯಕ ಸೇವೆಗೆ ಸಂದ ಮಹತ್ವದ ಮಾನ್ಯತೆಯಾಗಿದೆ.


Spread the love
Subscribe
Notify of

0 Comments