ಜನರ ಸಂಕಷ್ಟಕ್ಕೆ ಸ್ಪಂದಿಸದ ಶೋಭಾ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ – ಪ್ರಮೋದ್ ಮಧ್ವರಾಜ್
ಉಡುಪಿ: ಏಪ್ರಿಲ್ 18ರವರೆಗೆ ನನ್ನ ಜವಾಬ್ದಾರಿಯನ್ನು ನೀವು ಹೊರಬೇಕು ತದನಂತರ ನಾನು ನಿಮ್ಮ ಸೇವಕನಾಗಿ ನಿಮ್ಮ ಜವಾಬ್ದಾರಿಯನ್ನು ಹೋರುತ್ತೇನೆ ಎಂಬ ಆಶ್ವಾಸನೆ ನೀಡುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ರವರು ಕೋಟ, ಮಂದರ್ತಿ, ಸಾಸ್ತಾನಗಳಲ್ಲಿ ನಡೆದ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ಸಂಸದೆ ಶೋಭಾರವರು 5 ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ. ಜನರ ಸಂಕಷ್ಟಕ್ಕೆ ಸ್ಪಂದಿಸದ ಶೋಭಾರವರು ಮತ ಯಾಚಿಸುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ರಾಜ್ಯದ ಸಚಿವೆಯಾಗಿ, ಲೊಕಸಭಾ ಸದಸ್ಯೆಯಾಗಿ ಕಳೆದ ಬಾರಿ ಆಯ್ಕೆಗೊಂಡಿದ್ದರೂ ತನಗೆ ಮತ ಯಾಚಿಸುವ ಬದಲು ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿರುವುದು ದುರಂತವೇ ಸರಿ. ತನ್ನ ಅಸ್ಥಿತ್ವವನ್ನೇ ಕಳೆದುಕೊಂಡ ಸಂಸದರು ಈ ಬಾರಿ ಸೋಲುವುದು ಖಂಡಿತ. ಕರ್ನಾಟಕದ ಮೈತ್ರಿ ಸರಕಾರವು ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅವಿರತ ದುಡಿಯುತ್ತಿದೆ. ಕುಮಾರಸ್ವಾಮಿಯವರು ಕೃಷಿಕರಿಗೆ 46,000 ಕೋಟಿ ರೂಪಾಯಿ ಬಿಡುಗಡೆಗೊಳಿಸಿದ್ದಾರೆ. ಆದರೆ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ನಿರಾಕರಿಸುವದರೊಂದಿಗೆ ರೈತ ವಿರೋಧಿ ನಿಲುವು ಹೊಂದಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಗೆಲುವು ಸಾಧಿಸಿದಲ್ಲಿ ದೇಶದಲ್ಲಿಯೇ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇನೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಇದೇ ಸಂದರ್ಭದಲ್ಲಿ ಅಜಿತ್ ಶೆಟ್ಟಿಯವರ ನೇತೃತ್ವದಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾದ ಗಣೇಶ್ ಹಾಗೂ ಅವರ ಬಳಗದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಯ ಅಧ್ಯಕ್ಷತೆಯನ್ನು ಕೋಟ ಬ್ಲಾಕ್ ಅಧ್ಯಕ್ಷರಾದ ಶಂಕರ್ ಕುಂದರ್ ವಹಿಸಿದ್ದರು, ಸಭೆಯಲ್ಲಿ ಕೆಪಿಸಿಸಿ ಕಾಯದರ್ಶಿ ಮಮತಾ ಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಂಭು ಪೂಜಾರಿ, ಉಸ್ತುವಾರಿಗಳಾದ ಕೇಶವ ಎಂ. ಕೋಟ್ಯಾನ್, ಬಾಲಕೃಷ್ಣ ಪೂಜಾರಿ, ಪಿ. ರಾಜಾರಾಮ್, ಬಿ.ಕೆ. ತೇಜ ಪೂಜಾರಿ, ಇಬ್ರಾಹಿಂ, ಶ್ರೀನಿವಾಸ ಅಮೀನ್, ರವಿ ಕಾಮತ್, ದಿನೇಶ್ ಬಂಗೇರ, ಮಮತಾ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ಕಿಶೋರ್ ಶೆಟ್ಟಿ, ಮೋಸಸ್ ರೋಡ್ರಿಗಸ್, ಜೆ.ಡಿ.ಎಸ್.ನ ಅರುಣ್ ಕುಂದರ್ ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗಣೇಶ್ ನೆಲ್ಲಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.













