ಜಯಪ್ರಕಾಶ್ ಹೆಗ್ಡೆ ಅಪರೂಪದ ರಾಜಕಾರಣಿ – ಎಂ ಶ್ರೀನಿವಾಸ್

Spread the love

ಜಯಪ್ರಕಾಶ್ ಹೆಗ್ಡೆ ಅಪರೂಪದ ರಾಜಕಾರಣಿ – ಎಂ ಶ್ರೀನಿವಾಸ್

ಚಿಕ್ಕಮಗಳೂರು: ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ದೊರೆತಿರುವುದು ನಮ್ಮ ಭಾಗ್ಯ, ಅವರು ಸಂಸದರಾಗಿ ಆಯ್ಕೆಯಾದರೆ ಜಿಲ್ಲೆಯಲ್ಲಿ ಸುವರ್ಣಯುಗ ಪ್ರಾರಂಭವಾಗಲಿದೆ ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್ ಹೇಳಿದರು.

ಅವರು ಎನ್ ಆರ್ ಪುರ ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿಯಾಗಿದ್ದು ಶ್ರದ್ಧೆಯಿಂದ ಜನ ಸೇವೆ ಸಲ್ಲಿಸಿರುವ ಅವರಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿದೆ ಎಂದರು.

ಈಗಾಗಲೇ ತಾಲೂಕು ಕಚೇರಿಯನ್ನು ಪಟ್ಟಣದೊಳಗೆ ಸ್ಥಳಾಂತರಿಸಲು ಸಿಎಂ ಸಿದ್ದರಾಮಯ್ಯ 60ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಚುನಾವಣೆ ನಂತರ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ, ತಾಲೂಕು ಕಚೇರಿ ಸ್ಥಳಾಂತರ ಮಾಡಿಸಲಾಗುವುದು ಎಂದರು.

ಶಾಸಕ ಡಿ ಟಿ ರಾಜೇಗೌಡ ಮಾತನಾಡಿ, ಬಿಜೆಪಿ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುತ್ತಿದೆ. ಜಾತಿ, ಮತ, ಧರ್ಮ ಎಂಬ ಭೇದ ಸೃಷ್ಠಿಸಿ ಯುವಜನರನ್ನು ತಪ್ಪು ಹಾದಿಗೆ ಕೊಂಡೊಯ್ಯುತ್ತಿದೆ ಎಂದರು ಆರೋಪಿಸಿದರು.

ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನೂ ಕೇವಲ 10 ತಿಂಗಳೊಳಗೆ ಈಡೇರಿಸಿದೆ. ಹಿಂದುತ್ವ ಆಧಾರದ ಮೇಲೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸುಳ್ಳುಗಳೇ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ.

ರೈತರನ್ನು ಬಡವರನ್ನು ಹಗಲು ದರೋಡೆ ಮಾಡುತ್ತಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯಗಳನ್ನು ನೀಡುವ ಭರವಸೆ ನೀಡಲಾಗಿದೆ. ಒತ್ತುವರಿ ಜಾಗಕ್ಕೆ ಹಕ್ಕು ಪತ್ರ ವಿತರಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ. ಕೃಷಿ ಜಮೀನು, ಗೋಮಾಳ, ಗ್ರಾಮಠಾಣ ಜಾಗಗಳನ್ನು ಡೀಮ್ಡ್ ಫಾರೆಸ್ಟ್ ನೋಟಿಫಿಕೇಶನ್ ನಿಂದ ಕೈ ಬಿಡಲು ಶೇ.90 ಕೆಲಸವಾಗಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಭಾರತಕ್ಕೆ ಆಮದಾಗುವ ಅಡಕೆ ಜತೆಗೆ ಕಳ್ಳ ಸಾಗಣೆ ಮೂಲಕ ಬರುತ್ತಿದ್ದ ಅಡಕೆಗೆ ಕಡಿವಾಣ ಹಾಕಲಾಗಿತ್ತು. ಹಳದಿ ಎಲೆ ರೋಗ ಬಂದಾಗ ಕೇಂದ್ರ ಕೃಷಿ ಸಚಿವರೂ ಆದ ಸಂಸದೆ ಶೋಭಾ ಕರಂದ್ಲಾಜೆ ಏಕೆ ಚಕಾರ ಎತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ ಪಿ ಅಂಶುಮಂತ್ ಮಾತನಾಡಿ ಈ ಬಾರಿಯ ಚುನಾವಣೆ ರೈತರು, ಅಡಕೆ ಬೆಳೆಗಾರರು, ಬಡವರು ಬದುಕು ಕಟ್ಟಿಕೊಳ್ಳುವ ಚುನಾವಣೆಯಾಗಿದೆ ಅಧಿಕಾರ ಇದ್ದರೂ ಇಲ್ಲದಿದ್ದರೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯ ಜಯಪ್ರಕಾಶ್ ಹೆಗ್ಡೆ ಎಂದರು.

ಇದೇ ವೇಳೆ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಜೆ ಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.


Spread the love

Leave a Reply