ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯ ಹೊರೆ ಕಾಣಿಕೆ ಬೇಡ : ದಿನೇಶ್ ಮೆಂಡನ್
ಉಡುಪಿ: ಉಡುಪಿ ಪರ್ಯಾಯದಲ್ಲಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ 2026ಯಿಂದ ಹೊರೆಕಾಣಿಕೆ- ತಂಪು ಪಾನೀಯ ವಿತರಣೆಯ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ಹೇಳಿದ್ದಾರೆ.
ಹಿಂದೂ ಮುಸ್ಲಿಂ ಸೌಹಾರ್ದತೆ ಉಡುಪಿಯ ಪರ್ಯಾಯದಲ್ಲಿ ಕೇವಲ ತಂಪು ಪಾನೀಯ ,ನೀರಿನ ಬಾಟಲ್ , ನಿಮ್ಮ ದಫ್ ಹೊಡೆಯುವ ಕಾರ್ಯದಿಂದ ಸೌಹಾರ್ದತೆಯ ನಾಟಕದ ಅವಶ್ಯಕತೆ ಇಲ್ಲ ಮೊದಲು ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ನಿಲ್ಲಿಸುವುದರ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡಿ. ನಿಮ್ಮ ಈ ಎಲ್ಲಾ ಯೋಜನೆಗಳು ನಿಮ್ಮ ಹಬ್ಬದ ಸಮಯದಲ್ಲಿ ಹಮ್ಮಿಕೊಳ್ಳಿ ಬದಲಾಗಿ ನಮ್ಮ ಹಿಂದೂಗಳಪವಿತ್ರ ಹಬ್ಬಗಳಲ್ಲಿ ಒಂದಾದ ಪರ್ಯಾಯ ಕಾರ್ಯಕ್ರಮಗಳಲ್ಲಿ ಅವಶ್ಯಕತೆ ಇಲ್ಲ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ













