ಜಿಲ್ಲೆಯಲ್ಲಿ ಅಹಿತಕರ ಘಟನೆ ಇಮಾಮ್ಸ್ ಕೌನ್ಸಿಲ್ ಖಂಡನೆ

Spread the love

ಜಿಲ್ಲೆಯಲ್ಲಿ ಅಹಿತಕರ ಘಟನೆ ಇಮಾಮ್ಸ್ ಕೌನ್ಸಿಲ್ ಖಂಡನೆ

ಮಂಗಳೂರು: ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಶಕ್ತಿಯಾಗಿ ಖಂಡಿಸುತ್ತದೆ.

ಮದರಸ ವಿದ್ಯಾರ್ಥಿ,ದಾರಿಹೋಕರ ಮೇಲೆ ಚೂರಿ ಇರಿvಗಳು, ಮಸೀದಿಗಳಿಗೆ ಕಲ್ಲು ತೂರಾಟ, ಹಾನಿ, ಮುಸ್ಲಿಂ ದರ್ಮಗುರುಗಳ ಕೊಲೆಯತ್ನ ನಡೆದಿದ್ದು ಜಿಲ್ಲೆಯಲ್ಲಿ ಆಶಾಂತಿಯ ವಾತಾವರÀಣ ನಿರ್ಮಾಣವಾಗಿದ್ದು ಜನರು ಆತಂಕದಲ್ಲಿದ್ದಾರೆ. ದುಷ್ಕ್ರತ್ಯಗಳ ಮೂಲಕ ಕೋಮುಗಲಭೆಗೆ ಸಂಚು ರೂಪಿಸುತ್ತಿರುವ ಕೋಮುವಾದಿಗಳನ್ನು ಅದಷ್ಟು ಬೇಗದಲ್ಲಿ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಅದಲ್ಲದೆ ಮೈಸೂರು ಜೈಲಿನಲ್ಲಿ ಕೊಲೆಯಾದ ಕಾವೂರು ಮುಸ್ತಫ ಅವರ ಕುಟುಂಭಕ್ಕೆ ಗರಿಷ್ಟ ಪರಿಹಾರ ಮೊತ್ತವನ್ನು ಸರಕಾರ ನೀಡಬೇಕೆಂದು, ನಾಗರಿಕರು ವದಂತಿಗಳಿಗೆ ಕಿವಿ ಕೊಡದೆ ಶಾಂತಿ ಕಾಪಾಡಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನಾಯಕ ಮೌಲಾನಾ ಜಾಫರ್ ಸಾದಿಕ್ ಪೈಝಿ ಪ್ರಕಟನೆಯ ಮೂಲಕ ಅಗ್ರಹಿಸಿರುತ್ತಾರೆ.


Spread the love