ಟಿಪ್ಪು ಜಯಂತಿ ಆಚರಣೆ ಕೈ ಬಿಡದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ತಡೆ – ಶ್ರೀಶ ನಾಯಕ್

Spread the love

ಟಿಪ್ಪು ಜಯಂತಿ ಆಚರಣೆ ಕೈ ಬಿಡದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ತಡೆ – ಶ್ರೀಶ ನಾಯಕ್

ಉಡುಪಿ: ಟಿಪ್ಪು ಜಯಂತಿಯನ್ನು ಆಚರಿಸುವ ರಾಜ್ಯಸರಕಾರದ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು.ಇಲ್ಲವಾದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಎಲ್ಲಾ ರೀತಿಯ ಹೋರಾಟದ ಮಾರ್ಗಗಳನ್ನು ಬಳಸಿ ತಡೆಯುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದೇಶ ನೂರಾರು ಸುಲ್ತಾನರ ದಾಳಿ ಆಕ್ರಮಣಗಳನ್ನು ಎದುರಿಸಿದೆ. ಆದರೆ ಕರಾವಳಿಯ ಹಿಂದೂ ಸಮಾಜವನ್ನು ಇನ್ನಿಲ್ಲದಂತೆ ಕಾಡಿದವರು ಹೈದರಾಲಿ ಮತ್ತು ಟಿಪ್ಪು. ಟಿಪ್ಪು ಸುಲ್ತಾನನ ಅವಧಿಯಲ್ಲಿ ನಾಶಗೊಂಡ ಅನೇಕ ದೇವಾಲಯಗಳ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ಈ ಮತಾಂಧ ಕ್ರೈಸ್ತ್ ಸಮುದಾಯವನ್ನು ಬಿಟ್ಟಿರಲಿಲ್ಲ. ಮಂಗಳೂರಿನ ಸಾವಿರಾರು ಕ್ರೈಸ್ತರನ್ನು ಈತ ಮಾರಣಹೋಮ ನಡೆಸಿದ್ದ. ಈತನ ಮತಾಂಧತೆ ಮತ್ತು ಸಾಮ್ರಾಜ್ಯದಾಹಕ್ಕೆ ಮಲಬಾರ್, ಕೊಡಗು, ಕರ್ನಾಟಕದ ಉತ್ತರ ಭಾಗಗಳಲ್ಲಿ ಲಕ್ಷಾಂತರ ನರಸಂಹಾರ ನಡೆದಿದೆ. ಇದು ಐತಿಹಾಸಿಕ ಸತ್ಯಾವಾಗಿದ್ದರೂ ಇದನ್ನು ಕಡೆಗಣಿಸಿ ಕೇವಲ ಮತಾಂಧ ಮುಸ್ಲಿಮರ ಮತ ಗಳಿಸುವ ಏಕೈಕ ಉದ್ದೇಶದಿಂದ ಈ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಸರಕಾರಿ ಖಜಾನೆಯ ಹಣವನ್ನು ಯಾವುದೇ ಕಾರ್ಯಕ್ರಮಕ್ಕೆ ಖರ್ಚು ಮಾಡುವುದಿದ್ದರೆ ಆ ಕಾರ್ಯಕ್ರಮ ಪ್ರಜೆಗಳಿಂದ ಸರ್ವಸಮ್ಮತವಾಗಿರಬೇಕು. ಆದರೆ ಬಹುಸಂಖ್ಯಾತ ಸಮಾಜದ ವಿರೋಧವಿದ್ದರೂ ನಮ್ಮದೇ ಹಣ ಬಳಸಿ ಆ ನರಹಂತಕನ ಜಯಂತಿ ಆಚರಿಸಿ ನಮ್ಮ ಹಿರಿಯರ ಬಲಿದಾನವನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ.

ಸಿದ್ದರಾಮಯ್ಯ ಸರಕಾರದ ಈ ದಾರ್ಷ್ಯತನಕ್ಕೆ ಅದರದ್ದೇ ಆದ ಭಾಷೆಯಲ್ಲಿ ಉತ್ತರಿಸಲು ಉಡುಪಿ ಜಿಲ್ಲಾ ಯುವ ಮೋರ್ಚಾ ಸಿದ್ಧವಾಗಿದೆ. ನಮ್ಮ ವಿರೋಧವನ್ನು ಲೆಕ್ಕಿಸದೆ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಯೋಜಿಸಿದರೆ ಆ ಕಾರ್ಯಕ್ರಮವನ್ನು ನಿಲ್ಲಿಸುವ ಕಾರ್ಯವನ್ನು ನಾವು ಮಾಡಲಿದ್ದೇವೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗಳು ಸರಿಯಾಗಿರಬೇಕು ಎಂಬ ಕಾಳಜಿ ಜಿಲ್ಲಾಡಳಿತಕ್ಕ ಇದ್ದರೆ ಅದು ಈ ಟಿಪ್ಪುಜಯಂತಿ ಕಾರ್ಯಕ್ರಮವನ್ನು ಕೈ ಬಿಡಬೇಕು ಎಂದು ಅವರು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love