ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು

Spread the love

ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು

ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸಹಿತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆಸಿಕೊಂಡು ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತನ್ನು ಮಿಜಾರು ನಿವಾಸಿ ಮಹಮ್ಮದ್ ಫೈಸಲ್ @ತೋಡಾರ್ ಫೈಜಲ್ @ ಕ್ಯಾಬರೆ ಫೈಜಲ್ (28) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಗ್ರಾಮಾಂತ ಪೊಲೀಸ್ ಠಾಣೆಯ ಪೋಲಿಸ್ ನೀರಿಕ್ಷಕ ಸಿದ್ದೇಗೌಡ ಭಜಂತ್ರಿ ನೇತ್ರತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ಅವರು ತಮಗೆ ಸಿಕ್ಕಿದ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ರೌಡಿ ನಿಗ್ರಹದಳ ಸಿಬಂದಿಗಳೊಂದಿಗೆ ಬಂಧಿಸಿದ್ದಾರೆ.

ಸದ್ರಿ ಆರೋಪಿತನ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 6, ವೆಣೂರು ಪೊಲೀಸ್ ಠಾಣೆಯಲ್ಲಿ 2 ಮತ್ತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಒಳಗೊಂಡಂತೆ ಒಟ್ಟು 9 ಕಳವು ಪ್ರಕರಣಗಳು ದಾಖಲಾಗಿರುತ್ತವೆ.


Spread the love