ತಲ್ಲೂರಿನ ದೇವಸ್ಥಾನಗಳ ಅಭಿವೃದ್ದಿಗೆ ಜನರ ಧಾರ್ಮಿಕ ಬದ್ದತೆಗಳೇ ಕಾರಣ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

Spread the love

ತಲ್ಲೂರಿನ ದೇವಸ್ಥಾನಗಳ ಅಭಿವೃದ್ದಿಗೆ ಜನರ ಧಾರ್ಮಿಕ ಬದ್ದತೆಗಳೇ ಕಾರಣ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ತಲ್ಲೂರು ಗರೋಡಿ, ವಾರ್ಷಿಕ ಜಾತ್ರೆ ಹಾಗೂ ಕೆಂಡ ಸೇವೆ.

ಕುಂದಾಪುರ: ಒಂದು ವರ್ಷದ ಅವಧಿಯಲ್ಲಿ ಅಂದಾಜು 8 ಕೋಟಿಗೂ ಮಿಕ್ಕಿ ಮೂರು ದೇವಸ್ಥಾನಗಳ ಅಭಿವೃದ್ಧಿ ತಲ್ಲೂರಿನಲ್ಲಿ ನಡೆಯುತ್ತಿರುವುದಕ್ಕೆ ಇಲ್ಲಿನ ಜನರ ಧಾರ್ಮಿಕ ಬದ್ಧತೆಗಳೇ ಕಾರಣವಾಗಿದೆ. ಜನರ ಶೃದ್ಧಾ ಭಕ್ತಿಯ ಜೊತೆಗೆ, ದೈವ-ದೇವರುಗಳ ಅನುಗ್ರಹಗಳು ಅವರ ಮೇಲಿದೆ ಎನ್ನುವುದಕ್ಕೆ ಇಂದಿನ ಪುಣ್ಯ ಕಾರ್ಯದಲ್ಲಿ ಸೇರಿರುವ ಸಾವಿರಾರು ಭಕ್ತರೇ ನಮ್ಮ ಮುಂದಿದ್ದಾರೆ ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ತಲ್ಲೂರಿನ ಬ್ರಹ್ಮ ಬೈದರ್ಕಳ, ಮುಡೂರು ಹಾೈಗುಳಿ ಸಹಿತ ಸಪರಿವಾರ ದೈವಗಳ ಸಾನಿಧ್ಯದಲ್ಲಿ ವಾರ್ಷಿಕ ಜಾತ್ರೆ ಹಾಗೂ ಕೆಂಡ ಸೇವೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ದೈವ ಸ್ಥಾನ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಹಕರಿಸಿದವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿನ ಜನರು ಒಂದೇ ಮನಸ್ಸಿನಲ್ಲಿ ಅಭಿವೃದ್ಧಿಯ ಪರವಾಗಿ ಆಲೋಚನೆ ಮಾಡಿದರೆ ಆ ಗ್ರಾಮದಲ್ಲಿನ ಎಲ್ಲ ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳುತ್ತದೆ ಎನ್ನುವುದಕ್ಕೆ ತಲ್ಲೂರು ಗ್ರಾಮವೇ ಸಾಕ್ಷಿಯಾಗಿದೆ ಎಂದರು.

ಹಿರಿಯ ವಕೀಲರಾದ ಟಿ.ಬಿ.ಶೆಟ್ಟಿ ಮಾತನಾಡಿ, ಕೆಲವೇ ತಿಂಗಳುಗಳ ಅಂತರದಲ್ಲಿ ತಲ್ಲೂರಿನ ಮಹಾಲಿಂಗೇಶ್ವರ ದೇವಸ್ಥಾನ, ರಾಜಾಡಿಯ ರಕ್ತೇಶ್ವರಿ ದೇವಸ್ಥಾನ ಹಾಗೂ ತಲ್ಲೂರಿನ ಕೋಟಿ-ಚನ್ನಯ್ಯ ಗರೋಡಿಗಳ ಅಭಿವೃಧ್ಧಿ ಕಾರ್ಯ ನಡೆದಿರುವುದು ಈ ಊರಿನ ಜನರ ಸಾಮರಸ್ಯದ ಭಾವನೆಯನ್ನು ಬಿಂಬಿಸುತ್ತಿದೆ. ಇಲ್ಲಿನ ಧಾರ್ಮಿಕ ಪುರುತ್ಥಾನದ ಕಾರ್ಯಕ್ರಮಗಳಿಗಾಗಿ ಜನರೇ ಸ್ವಯಂಸ್ಪೂರ್ತಿಯಿಂದ ಧನ ಸಹಾಯವನ್ನು ಮಾಡಿರುವುದು ಚರಿತ್ರೆಯ ಪುಟದಲ್ಲಿ ಉಳಿಯಲಿದೆ ಎಂದರು.

ಪತ್ರಕರ್ತ ರಾಜೇಶ್ ಕೆ.ಸಿ ಅವರು, ಗ್ರಾಮದಲ್ಲಿ ಸಂಸ್ಕೃತಿ ಸಾಮರಸ್ಯಗಳು ಅರಳಬೇಕು ಎಂದಾರೆ ಅಲ್ಲಿನ ಧಾರ್ಮಿಕ ಶೃದ್ಧಾ ಕೇಂದ್ರಗಳು ಹಾಗೂ ಶಾಲೆಗಳು ಅಭಿವೃದ್ದಿಗೊಳ್ಳಬೇಕು. ತಲ್ಲೂರು ಗರೋಡಿಯಲ್ಲಿ ಲೋಕಾರ್ಪಣೆಗೊಂಡ ಅತ್ಯಂತ ಸುಂದರವಾದ ಶಿಲಾಮಯ ದೈವಸ್ಥಾನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಕನಸುಗಳು ಸಾಕಾರವಾಗಬೇಕಾದರೇ, ಅದಕ್ಕೆ ಸಮರ್ಥ ನಾಯಕತ್ವವೂ ಅಗತ್ಯವಿದೆ. ತಲ್ಲೂರಿನ ಅಂತಹ ನಾಯಕತ್ವ ದೊರಕಿರುವುದರಿಂದಲೇ ಈ ಭಾಗದಲ್ಲಿ ಕ್ಷಿಪ್ರಗತಿಯಲ್ಲಿ ಅಭಿವೃಧ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.

ಗರೋಡಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ವಸಂತ ಆರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗರೋಡಿಯ ಆಡಳಿತ ಮಂಡಳಿಯ ಮುರುಳೀಧರ ಶೆಟ್ಟಿ ದೊಡ್ಮನೆ, ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ನಾಯ್ಕ್, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ರವೀಂದ್ರ ಶ್ರೀಯಾನ್, ಸರ್ವೋತ್ತಮ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪೂಜಾರಿ ಇದ್ದರು.
.
ಕುಸುಮಾಕರ ಶೆಟ್ಟಿ ಸ್ವಾಗತಿಸಿದರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕರಣ್ ಪೂಜಾರಿ, ದೇವರಾಜ್ ತಲ್ಲೂರು ನಿರೂಪಿಸಿದರು.


Spread the love