ದರೋಡೆಗಾಗಿ ಸಂಚು ರೂಪಿಸಿಕೊಂಡು ಹೊಂಚು ಹಾಕುತ್ತಿದ್ದ ಆರೋಪಿಗಳ ಬಂಧನ

Spread the love

ದರೋಡೆಗಾಗಿ ಸಂಚು ರೂಪಿಸಿಕೊಂಡು ಹೊಂಚು ಹಾಕುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು: ಫೆಬ್ರವರಿ 16ರಂದು ಬೆಳಿಗ್ಗಿನ ಜಾವ 3-30 ಗಂಟೆಗೆ ಬೆಂಗ್ರೆಯ ಭರತೇಶ್ ಈತನ ಅಣ್ಣ ಶಿವರಾಜ್ ಕರ್ಕೇರನ ಕೊಲೆಗೆ ಪ್ರತಿಕಾರವಾಗಿ ಕೊಲೆ ಮಾಡಿ ಹೊರ ರಾಜ್ಯಕ್ಕೆ ಪರಾರಿಯಾಗಲು ಸಾರ್ವಜನಿಕರಿಂದ ಹಣಕಾಸು ಮತ್ತು ಸೊತ್ತುಗಳನ್ನು ದೋಚುವ ಸಲುವಾಗಿ ಮಾರಕಾಯುಧಗಳನ್ನು ಇಟ್ಟುಕೊಂಡು ದರೋಡೆ ಕೃತ್ಯಕ್ಕೆ ಸಂಚು ರೂಪಿಸಿಕೊಂಡು ರಾಹೆ 66 ರ ಕುದ್ರೆಮುಖ ಜಂಕ್ಷನ್ ಬಳಿ ಹೊಂಚು ಹಾಕುತ್ತಿದ್ದ ಸುಮಾರು 4-5 ಯುವಕರನ್ನು ಖಚಿತ ಮಾಹಿತಿ ಬಂದಂತೆ ಕಾರ್ಯಪ್ರವೃತ್ತರಾದ ಪಣಂಬೂರು ಕಾನೂನು ಸುವ್ಯವಸ್ಥೆಯ ಪಿ.ಎಸ್.ಐ ಎಂ.ಎನ್ ಉಮೇಶ್ ಕುಮಾರ್, ಪಣಂಬೂರು ಠಾಣಾ ಸಿಬ್ಬಂದಿಗಳು ಹಾಗೂ ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ಮಾಡಿ ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದು ಅವರುಗಳಿಂದ ಕೃತ್ಯಕ್ಕೆ ಉಪಯೋಗಿಸಲು ಇಟ್ಟುಕೊಂಡಿದ್ದ ಮಾರಕಾಸ್ತ್ರಗಳನ್ನು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದು, ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಂಧಿತರನ್ನು ಅಂಬಲಪಾಡಿ ನಿವಾಸಿ ಪ್ರದೀಪ್ ಕುಮಾರ್ @ಪ್ರದೀಪ್ ಮೆಂಡನ್ (47), ಕುದ್ರೋಳಿ ಬೆಂಗ್ರೆ ನಿವಾಸಿ ಸುನೀಲ್ (20), ಬೋಳಾರ ನಿವಾಸಿ ಚರಣ್ (32) ಎಂದು ಗುರುತಿಸಲಾಗಿದೆ.ಆರೋಪಿಗಳ ಪೈಕಿ ಇನ್ನಿಬ್ಬರುಗಳಾದ ಭರತ್ ಮತ್ತು ನವೀನ್ ತಪ್ಪಿಸಕೊಂಡಿರುತ್ತಾರೆ.

ಬಂಧಿತರು ಅಪರಾಧ ಹಿನ್ನಲೆಯುಳ್ಳವರಾಗಿದ್ದು ಆರೋಪಿ ಪ್ರದೀಪ್ ಕುಮಾರ್ @ ಪ್ರದೀಪ್ ಮೆಂಡನ್ ಈತನ ಮೇಲೆ ಮಂಗಳೂರು ನಗರ ಮತ್ತು ಹೊರಭಾಗದಲ್ಲಿ ಒಟ್ಟು 14 ಪ್ರಕರಣಗಳಿದ್ದು, ಆರೋಪಿ ಚರಣ್ ಶೇಟ್ ಈತನ ಮೇಲೆ ಒಟ್ಟು 04 ಪ್ರಕರಣಗಳಿರುತ್ತವೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು, ಠಾಣಾ ಪಿ.ಎಸ್.ಐ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್ ಉಮೇಶ್ ಕುಮಾರ್ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love