Spread the love
ದೀಪಾವಳಿ: ಪಟಾಕಿ ಸದ್ದು- ಸಾಕುಪ್ರಾಣಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ
ಮಂಗಳೂರು: ದೀಪಾವಳಿ ಹಬ್ಬದ ದಿನಗಳಲ್ಲಿ ಸಾರ್ವಜನಿಕರು ಸಿಡಿಸುವ ಸಿಡಿಮದ್ದುಗಳ (ಪಟಾಕಿ) ಶಬ್ದದಿಂದ ಸಾಕು ಪ್ರಾಣಿ/ಜಾನುವಾರುಗಳಲ್ಲಿ ಭೀತಿ ಸೃಷ್ಟಿಯಾಗಿ ಜಾನುವಾರುಗಳು ಹಲವು ದಿನಗಳ ಕಾಲ ಆಹಾರವನ್ನು ತ್ಯಜಿಸುತ್ತವೆ ಹಾಗೂ ಮೂಲ ಸ್ಥಾನದಿಂದ ಪಲಾಯನ ಮಾಡುವ ಸಂಭವವಿರುತ್ತದೆ. ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ವ್ಯತಿರಿಕ್ತ ಪರಿಣಾಮಗಳಾಗುತ್ತದೆ.
ಆದುದರಿಂದ ಸಾರ್ವಜನಿಕರು ಪ್ರಾಣಿಗಳನ್ನು ಪಟಾಕಿಗಳ ಕರ್ಕಶ ಶಬ್ದಗಳಿಂದ ಮುಕ್ತಗೊಳಿಸಲು ಅಗತ್ಯ ಮುಂಜಾಗೃತಾ ಕ್ರಮವಹಿಸುವುದು ಹಾಗೂ ಪರಿಸರ ಸ್ನೇಹಿ ಸಿಡಿಮದ್ದು (ಗ್ರೀನ್ ಕ್ರ್ಯಾಕರ್ಸ್) ಗಳಿಗೆ ಆದ್ಯತೆ ನೀಡುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love













